ಹೈದರಾಬಾದ್: ಭಾರತ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಆಡುವ ಬಳಗವನ್ನು ಪ್ರಕಟಿಸಲಾಗಿದೆ.ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಹೈದರಾಬಾದ್ನಲ್ಲಿ ಗುರುವಾರ ಆರಂಭವಾಗಲಿದೆ. ಇದರಂತೆ ಒಂದು ದಿನ ಮೊದಲೇ ಇಂಗ್ಲೆಂಡ್ ತಂಡವನ್ನು
ಪ್ರಕಟಿಸಲಾಗಿದೆ. ತಂಡದಿಂದ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರನ್ನು ಕೈಬಿಡಲಾಗಿದೆ. ನಾಲ್ವರು ಸ್ಪಿನ್ನರ್ಗಳು ಸ್ಥಾನ ಪಡೆದಿದ್ದಾರೆ. ಟಾಮ್ ಹಾರ್ಟ್ಲಿ ಚೊಚ್ಚಲ ಟೆಸ್ಟ್ ಕ್ಯಾಪ್ ಪಡೆಯಲಿದ್ದಾರೆ. ನಾಯಕ ಬೆನ್ ಸ್ಟೋಕ್ಸ್, ಓಲಿ ಪೋಪ್, ರೆಹಾನ್ ಅಹ್ಮದ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಇಂತಿದೆ:
ಬೆನ್ ಸ್ಟೋಕ್ಸ್ (ನಾಯಕ)
ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಓಲಿ ಪೋಪ್, ಜಾನಿ ಬೇಸ್ಟೊ
ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ
ಮಾರ್ಕ್ ವುಡ್, ಜಾಕ್ ಲೀಚ್










