ಅಂಟಿಗುವಾ: ಟಿ20 ಪಂದ್ಯದಲ್ಲಿ ಓಮನ್ ವಿರುದ್ಧ ಇಂಗ್ಲೇಂಡ್ ಕೇವಲ 19 ಎಸೆತಗಳಲ್ಲಿ ಗೆಲುವು ಸಾಧಿಸಿದೆ. ಓಮನ್ನೀಡಿದ 47 ರನ್ಗಳ ಟಾರ್ಗೆಟ್ನ ಕೇವಲ 3.1 ಓವರ್ಗಳಲ್ಲಿ ಚೇಸ್ ಮಾಡಿ ದಾಖಲೆ ಬರೆದಿದೆ. ಇದರೊಂದಿಗೆ ಸೂಪರ್ 8ಗೆ ಏರುವ ಕನಸನ್ನು
ಜೀವಂತವಾಗಿ ಇರಿಸಿಕೊಂಡಿದೆ.ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಮಾರಕದಾಳಿಗೆ ಓಮನ್ ತತ್ತರಿಸಿತು. ಆದಿಲ್ ರಶಿದ್ ಅವರು ನಾಲ್ಕು ವಿಕೆಟ್ ಕಿತ್ತರೆ ಮಾರ್ಕ್ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರು. 13.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಓಮನ್ 46 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿತು. ಕೇವಲ 19 ಬಾಲ್ಗೆ ಟಾರ್ಗೆಟ್ ರೀಚ್ ಆಯಿತು.