*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ರಾಜಕೀಯವಾಗಿ, ಆಡಳಿತಾತ್ಮಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಕೃಷಿ ಪ್ರೀತಿಯನ್ನು ಮರೆಯದವರು ಮಾಜಿ ಮುಖ್ಯಮಂತ್ರಿ,ಮಾಜಿ ಕೇಂದ್ರ ಸಚಿವ, ಹಾಲಿ ಸಂಸದರಾಗಿರುವ ಡಿ.ವಿ.ಸದಾನಂದ ಗೌಡರು. ಆದುದರಿಂದಲೇ ಈ ಭಾಗಕ್ಕೆ ಬಂದಾಗಲೆಲ್ಲಾ ದೇವರಗುಂಡದ ತಮ್ಮ ಕೃಷಿ ಭೂಮಿಗೆ ಬಂದು ಒಂದು ಸುತ್ತು ಹಾಕಿ ಒಂದೆರಡು ಗಂಟೆ ತೋಟದ ಪ್ರಶಾಂತ ವಾತಾವರಣದಲ್ಲಿ ಕಳೆದು ಅವರು ಹಿಂತಿರುಗುತ್ತಾರೆ. ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ
The sullia Mirror YouTube channel
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಕೃಷಿ ಪ್ರೀತಿ ಹಾಗು ಕೃಷಿ ಅನುಭವ
ನಮ್ಮ YouTube Channel ವೀಕ್ಷಿಸಿ ಮತ್ತು Subscribe ಮಾಡಿ
ಸದಾನಂದ ಗೌಡರು ಸಿಕ್ಕಿದ ಅಲ್ಪ ಸಮಯದಲ್ಲಿ ತಮ್ಮ ತೋಟಕ್ಕೆ ಬಂದು ಒಂದು ರೌಂಡ್ ಹಾಕಿ ಕೃಷಿಯನ್ನು ಅಡಿಕೆ, ರಬ್ಬರ್ ತೋಟವನ್ನು ನೋಡಿ ತೆರಳಿದರು. ಪತ್ರಕರ್ತರು ತೆರಳಿದಾಗ ಸದಾನಂದ ಗೌಡರು ತೋಟದಲ್ಲಿದ್ದರು. ಪತ್ರಕರ್ತರು ತೋಟಕ್ಕೆ ಬಂದಾಗ ಸದಾನಂದ ಗೌಡರು ತಮ್ಮ ಎಂದಿನ ನಗುಮೊಗದ ಭಾವದಿಂದಲೇ ಬರ ಮಾಡಿಕೊಂಡು ಮಣ್ಣಿನೊಂದಿಗಿನ ತಮ್ಮ ಅವಿನಾಭಾವ ನಂಟು, ಕೃಷಿ ಪ್ರೀತಿಯನ್ನು ಹಂಚಿ ಕೊಂಡರು. ಸುಳ್ಯದಲ್ಲಿ ವಕೀಲರಾಗಿದ್ದ ಸಂದರ್ಭದಲ್ಲಿ ಮತ್ತು ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ತೋಟಕ್ಕೆ ತೆರಳಿ ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದರು. ಬಳಿಕ ಶಾಸಕ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ, ಕೇಂದ್ರ ಸಚಿವ ಹೀಗೆ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಸದಾನಂದ ಗೌಡರು ಎತ್ತರಕ್ಕೆ ಏರಿದಾಗ ಊರಿನ ಕೃಷಿ ಚಟುವಟಿಕೆಗಳಿಂದ ದೂರ
ಉಳಿಯಬೇಕಾಯಿತು. ಆದರೂ ಈಕಡೆ ಬಂದಾಗಲೆಲ್ಲ ತೋಟಕ್ಕೆ ಭೇಟಿ ಕೊಡುತ್ತಿದ್ದರು. ಈಗಲೂ ಬಂದಾಗಲೆಲ್ಲ ತೋಟಕ್ಕೆ ಭೇಟಿ ಕೊಡುವುದನ್ನು ಮರೆಯುವುದಿಲ್ಲ. ಕೊಕ್ಕೊ ಗಿಡ, ಅಡಿಕೆ, ಬಾಳೆ ಗಿಡಗಳ ಮಧ್ಯೆ ಕಾಲ ಕಳೆಯುವಾಗ ಸಿಗುವ ಸಂತೋಷ ಎಲ್ಲಾ ಅಧಿಕಾರಕ್ಕಿಂತ ಹೆಚ್ಚು ಖುಷಿ ಕೊಡುತ್ತದೆ. ಹಳೆ ನೆನಪುಗಳು ಬೇಕು..ಅದರಲ್ಲೇ ಬದುಕು.. ಎಂಬ ಕವಿ ವಾಣಿಯನ್ನು ಉಚ್ಚರಿಸಿದ ಅವರು ಎಲ್ಲಾ ಜಂಜಾಟದಿಂದ ಹೊರ ಬಂದು ಇಲ್ಲಿ ಕಳೆಯುವ ಸಮಯ ಹೆಚ್ಚು ಖುಷಿ ಕೊಡುತ್ತದೆ. ಆದುದರಿಂದಲೇ ಅಧಿಕಾರದಲ್ಲಿ ಇದ್ದಾಗಲೂ ಇಲ್ಲಿ ಬಂದಾಗಲೆಲ್ಲ ತೋಟಕ್ಕೆ ಬರುತ್ತಿದ್ದೆ..ಈಗಲೂ ಬರುತ್ತೇನೆ ಎಂದರು. ಒಬ್ಬ ಕೃಷಿಕನಾಗಿ ಪಡೆದ ಅನುಭವ, ಸುಳ್ಯದ ಈ ಮಣ್ಣಿನ ಗುಣ ರಾಜಕೀಯದ ಮತ್ತು ಆಡಳಿತದ ಸವಾಲುಗಳನ್ನು ಎದುರಿಸಿ ಮೇಲೆ ಏರಲು ಶಕ್ತಿ ಮತ್ತು ಪ್ರೇರಣೆ ನೀಡಿತು ಎಂಬುದು ಡಿ.ವಿಯವರ ಮನದಾಳದ ಮಾತು. ಸುಮಾರು ಇಪ್ಪತ್ತು
ವರ್ಷಗಳ ಹಿಂದಿನಿಂದಲೂ ಅಡಿಕೆ ಬೆಳೆಗಾರರ ಹಿತಕ್ಕಾಗಿ ನಡೆಸಿದ ಹೋರಾಟ, ಸರಕಾರದ ಭಾಗವಾಗಿ ಅಧಿಕಾರದಲ್ಲಿ ಇದ್ದಾಗ ಅಡಿಕೆ, ಕಾಫಿ ಕೃಷಿಕರ ಪರವಾಗಿ ಬಿಜೆಪಿ ಸರಕಾರ ಮಾಡಿರುವ ಕ್ರಮಗಳು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವನಾಗಿದ್ದಾಗ ರಸ ಗೊಬ್ಬರ ಉತ್ಪಾದನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಅವರು ಮೆಲುಕು ಹಾಕಿದರು. ಅಡಿಕೆ ತೋಟ ಸುತ್ತುತ್ತಲೇ ಮಾತು ಮುಂದುವರಿಸಿದರು. ಅಡಿಕೆ, ರಬ್ಬರ್ ಸೇರಿದಂತೆ ಸುಮಾರು ಐದು ಎಕ್ರೆಯಷ್ಟು ಬರುವ ಕೃಷಿಭೂಮಿಗೆ ಒಂದು ಸುತ್ತು ಹಾಕಿದಾಗ ಸಿಕ್ಕಿದ ನೆಮ್ಮದಿ, ಆನಂದದೊಂದಿಗೆ ಸದಾನಂದ ಗೌಡರು ಮತ್ತೆ ಬೆಂಗಳೂರಿನತ್ತ ಗಾಡಿ ಏರಿದರು..