ಸುಳ್ಯ:ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ
ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 ಪಂದ್ಯಾವಳಿಯಲ್ಲಿ ಸುಳ್ಯ ತಾಲೂಕು ಪುರುಷರ ತಂಡ ಚತುರ್ಥ ಸ್ಥಾನ ಪಡೆದುಕೊಂಡಿದೆ. ಸುಳ್ಯ ತಾಲೂಕು
ವಾಲಿಬಾಲ್ ಅಸೋಸಿಯೇಷನ್ನ ಪುರುಷ ಹಾಗೂ ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ಪುರುಷರ ತಂಡಕ್ಕೆ ಚತುರ್ಥ ಸ್ಥಾನ ಲಭಿಸಿದೆ. ಭುವನೇಂದ್ರ ನಾಯಕತ್ವದ ತಂಡ ಉತ್ತಮ ಪ್ರದರ್ಶನ ನೀಡಿ ಚತುರ್ಥ ಸ್ಥಾನ ಪಡೆದುಕೊಂಡಿದೆ.ಜಿಲ್ಲೆಯ ಎಂಟು ತಾಲೂಕು ಪುರುಷ, ಮಹಿಳಾ ತಂಡಗಳು ಭಾಗವಹಿಸಿದ್ದವು.














