ಮಂಗಳೂರು:ದ.ಕ.ಜಿಲ್ಲಾಡಳಿತ ನೀಡುವ 2023ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವೈಯುಕ್ತಿಕ ವಿಭಾಗದಲ್ಲಿ 46 ಮಂದಿಗೆ ಮತ್ತು ಸಂಘ ಸಂಸ್ಥೆ ವಿಭಾಗದಲ್ಲಿ 17 ಪ್ರಶಸ್ತಿ ಘೋಷಿಸಲಾಗಿದೆ. ಸುಳ್ಯದ ಕೆ.ಟಿ.ವಿಶ್ವನಾಥ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಮಾಜ ಸೇವಾ ವಿಭಾಗದಲ್ಲಿ
ಪ್ರಶಸ್ತಿ ಒಲಿದು ಬಂದಿದೆ. ಸುಳ್ಯ ಕಸಬಾದ ದುಗ್ಗಲಡ್ಕ ಕೊಯಿಕುಳಿ ಮನೆಯ ತಿಮ್ಮಪ್ಪ ಗೌಡ ಅವರ ಪುತ್ರರಾದ ಡಾ.ಕೆ.ಟಿ.ವಿಶ್ವನಾಥ್ ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಧಪಕಾಧ್ಯಕ್ಷ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹಾಗೂ ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಕೆ.ಟಿ.ವಿಶ್ವನಾಥ ಅವರನ್ನು ಅಭಿನಂದಿಸಿದ್ದಾರೆ.









