ಸುಳ್ಯ:ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಡಾ. ರೇಣುಕಾ ಪ್ರಸಾದ್ ಮತ್ತು ಡಾ. ಜ್ಯೋತಿ ಆರ್ ಪ್ರಸಾದ್ ಅವರ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮತ್ತು ಸಂಸ್ಥೆಯ ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುತ್ತಿರುವವರ ಬಗ್ಗೆ ಮತ್ತು ಪ್ರಚಾರ ಮಾಡುತ್ತಿರುವವರ ಕುರಿತು
ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಪಾಂಶುಪಾಲರುಗಳು ಮತ್ತು ಸಿಬ್ಬಂದಿಗಳು ಮಂಗಳೂರಿನ ಜಿಲ್ಲಾ ಸೈಬರ್ ಕ್ರೈಂ ಅಧಿಕ್ಷಕಾರಿಗಳಿಗೆ ದೂರು ನೀಡಿದ್ದಾರೆ. ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಕೆ.ವಿ.ಜಿ ದಂತ ಮಹಾವಿದ್ಯಾಲಯ, ಕೆ.ವಿ.ಜಿ ಪಾಲಿಟಿಕ್ನಿಕ್, ಕೆ.ವಿ.ಜಿ ಐ.ಟಿ.ಐ ಮತ್ತು ಕೆ.ವಿ.ಜಿ ಐ.ಪಿ.ಎಸ್ ನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಸಹಿ ಮಾಡಿದ ದೂರನ್ನು ಮಂಗಳೂರಿನ ಜಿಲ್ಲಾ ಸೈಬರ್ ಕ್ರೈಂಗೆ ನೀಡಲಾಗಿದೆ. ವಾಟ್ಸಾಪ್, ಫೆಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮತ್ತು ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುವುದು ಮತ್ತು ಪ್ರಚಾರ ಮಾಡುವುದು ಕಂಡು ಬಂದಿದೆ. ಅಂತಹಾ ಬರಹಗಳನ್ನು ಬರೆಯುವವರನ್ನು ಮತ್ತು ಆ ಬರಹಗಳ ಪ್ರಸಾರ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.