ಸುಳ್ಯ:ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ತಾಲೂಕು ಮಹಿಳಾ ಘಟಕದ ವತಿಯಿಂದ ಮಕ್ಕಳ ಮುಕ್ತ ಚೆಸ್ ಸ್ಪರ್ಧೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಚೆಸ್ ಸ್ಪರ್ಧೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉದ್ಘಾಟಿಸಿ, ಶುಭಹಾರೈಸಿದರು.
ಮಹಿಳಾ ಘಟಕದ ಅಧ್ಯಕ್ಷೆ ವಿನುತ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ
ಕರ್ನಾಟಕ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರಾಗಿರುವ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ವೆಂಕಟ್ರಮಣ ಕ್ರೆಡಿಟ್ ಕೋಆಪರೆಟಿವ್ ಸೊಸೈಟಿಯ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಸುಳ್ಯ ತಾಲೂಕು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಶಾಂತಾರಾಮ ಭಟ್, ಕಾರ್ಯದರ್ಶಿ ಹರಿಪ್ರಸಾದ್ ಕೊಯಿಂಗಾಜೆ, ಎಂ.ಜಿ.ಎಂ. ವಿದ್ಯಾ ಸಂಸ್ಥೆಗಳ ಸಂಚಾಲಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕದ ಉಸ್ತುವಾರಿ ಸುರೇಶ್ ಎಂ.ಎಚ್, ತಾಲೂಕು

ತರುಣ ಘಟಕದ ಅಧ್ಯಕ್ಷ ಪ್ರೀತಂ ಕೇರ್ಪಳ, ಮಹಿಳಾ ಘಟಕದ ಪೂರ್ವಾಧ್ಯಕ್ಷರಾದ ರೇಣುಕಾ ಸದಾನಂದ ಜಾಕೆ, ಪುಷ್ಪಾ ರಾಧಾಕೃಷ್ಣ, ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸಂದೇಶ್ ಕೋಶಾಧಿಕಾರಿ ಜಯಶ್ರೀ ಪಲ್ಲತ್ತಡ್ಕ, ಚೆಸ್ ಸ್ಪರ್ಧೆ ಸಂಚಾಲಕಿ ಭಾರತಿ ಉಳುವಾರು, ಸಹ ಸಂಚಾಲಕಿ ತಾರಾ ಮಾಧವ ಬೆಳ್ಳಾರೆ ಮೊದಲಾದವರು ವೇದಿಕೆಯಲ್ಲಿ ಇದ್ದರು.

ಗೌಡ ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸಂದೇಶ್ ಸ್ವಾಗತಿಸಿದರು, ಅಧ್ಯಕ್ಷೆ ವಿನುತಾ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಮೀನಾಕ್ಷಿ ರಾಮಕಜೆ ಪ್ರಾರ್ಥಿಸಿದರು. ತಾರಾ ಮಾಧವ ವಂದಿಸಿದರು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.
1ರಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗಾಗಿ ಮುಕ್ತ ಚೆಸ್ ಸ್ಪರ್ಧೆ ಏರ್ಪಡಿಸಲಾಗಿದ್ದು. ಕಿರಿಯ ಪ್ರಾಥಮಿಕ (1-5) ಹಿರಿಯ ಪ್ರಾಥಮಿಕ (6-8) ಮತ್ತು ಪ್ರೌಢಶಾಲಾ ವಿಭಾಗ (9-10) ದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗಿದೆ. ಸುಮಾರು 100ಕ್ಕೂ ಅಧಿಕ ಮಕ್ಕಳು ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.






