ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದ್ದು ದೇಗುಲದ ಪ್ರಾಂಗಣದಲ್ಲಿ ಚಂಡಿಕಾ ಹೋಮ ನಡೆಯಿತು.
ಆರಂಭದಲ್ಲಿ ಗಣಪತಿ ಹವನ ಹಾಗೂ
ಸಾಯುಜ್ಯ ಕರ್ಮಾಧಿಗಳು ನಡೆದ ಬಳಿಕ ಚಂಡಿಕಾ ಹೋಮ ನಡೆಯಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತ್ರತ್ವದಲ್ಲಿ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ನಡೆದವು.
ಬಳಿಕ ನಡೆದ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಊರ, ಪರ ಊರ ಭಕ್ತಾದಿಗಳು ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.