ಸುಳ್ಯ: ವಿಧಾನಸಭೆ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬೆಳಿಗ್ಗೆ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಬೂತ್
ಮತ ಚಲಾಯಿಸಿ ಹೊರ ಬರುತ್ತಿರುವ ಭಾಗೀರಥಿ ಮುರುಳ್ಯ
ಸಂಖ್ಯೆ 84 ಮುರುಳ್ಯ ಶಾಂತಿನಗರ ಬೂತ್ನಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರಾಮಕುಂಜ ಬೂತ್ ಸಂಖ್ಯೆ 8 ರಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಪ್ರೊ.ಹೆಚ್.ಎಲ್.ವೆಂಕಟೇಶ್ ಅವರು ಬೂತ್ ಸಂಖ್ಯೆ 172 ಜಟ್ಟಿಪಳ್ಳದಲ್ಲಿ ಮತ ಚಲಾಯಿಸಿದರು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಬೂತ್ ಸಂಖ್ಯೆ 177 ತಾಲೂಕು ಪಂಚಾಯತ್ ಬೂತ್ನಲ್ಲಿ ಮತ ಚಲಾಯಿಸಿದರು.