ತಲಕಾವೇರಿ: ತಲಕಾವೇರಿಯಲ್ಲಿ ಅ.17ರಂದು ಮಧ್ಯಾಹ್ನ 1.44ಕ್ಕೆ ‘ಕಾವೇರಿ ಪವಿತ್ರ ತೀರ್ಥೋದ್ಭವ’ ನಡೆಯಿತು.ಸಹಸ್ರಾರು ಭಕ್ತರಿಂದ ಮಾತೆ ಕಾವೇರಿಗೆ ನಮನ ಸಲ್ಲಿಸಿ ಜೈ ಮಾತಾ ಕಾವೇರಿ ಮಾತಾ ಉದ್ಘೋಷದ ಭಕ್ತಿ ಪರವಶತೆಯ ನಡುವೆ ನಿಗಧಿತ ಮುಹೂರ್ತ ಮಧ್ಯಾಹ್ನ 1.44 ಗಂಟೆಗೆ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿದಳು.
ತೀರ್ಥೋದ್ಭವ ನಡೆದಾದ ಅರ್ಚಕ ವೖಂದದವರಿಂದ
ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥೊದ್ಭವ ಕಣ್ತುಂಬಿಕೊಂಡು ಭಕ್ತರು ಪುನೀತರಾದರು.ಕುಂಕುಮಾರ್ಚನೆ ಪುಷ್ಪಾರ್ಚನೆ ಮೂಲಕ ಕಾವೇರಿಗೆ ಪೂಜೆ ಸಲ್ಲಿಸಿ ಫಲಗಳ ಸಮರ್ಪಣೆ ಮಾಡುತ್ತಿದ್ದಂತೆ ಕಾವೇರಿ ತೀರ್ಥರೂಪ ತೋರಿದಳು.ತೀರ್ಥೋದ್ಭವದ ಬಳಿಕ ತೀರ್ಥ ಪಡೆಯಲು, ತೀರ್ಥಸ್ನಾನ ಮಾಡಲು ಭಾರೀ ರಶ್ ಕಂಡು ಬಂತು. ಹಗಲಿನ ವೇಳೆ ತೀರ್ಥೋದ್ಭವ ನಡೆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉಕ್ಕಿ ಬಾ.. ಉಕ್ಕಿ ಬಾ. ಕಾವೇರಿ ಮಾತಾ ಉಕ್ಕಿ ಬಾ.. ಜೈ ಜೈ ಮಾತಾ ಕಾವೇರಿ ಮಾತಾ. ಉದ್ಗೋಷದೊಂದಿಗ ಕ್ಷೇತ್ರದಲ್ಲಿ ಸಾವಿರಾರು ಮಂದಿ ಭಕ್ತರು ನೆರೆದಿದ್ದರು.












