ಸುಳ್ಯ: 2023-24 ನೇ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಸುಳ್ಯದ ಆಶೀಶ್ ಆನಂದ ಖಂಡಿಗ ಉತ್ತೀರ್ಣರಾಗಿದ್ದಾರೆ.ಇವರು ಕೇರ್ಪಳ ಆನಂದ ಗೌಡ ಖಂಡಿಗ ಮತ್ತು ಶೋಭಾ ದಂಪತಿಯ ಪುತ್ರರಾಗಿರುತ್ತಾರೆ. ಕೇರ್ಪಳಬೂಡು ಶ್ರಿ ಭಗವತಿ ಯುವ ಸೇವಾ ಸಂಘದ ವತಿಯಿಂದ
ಆಶೀಶ್ ಖಂಡಿಗ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ ವಹಿಸಿದ್ದರು.ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಅಭಿನಂದನಾ ಮಾತುಗಳನ್ನಾಡಿದರು.
ನಿಕಟಪೂರ್ವಾಧ್ಯಕ್ಷ ಗೋಪಾಲ ಎಸ್. ನಡುಬೈಲು, ಉಪಾಧ್ಯಕ್ಷ ರಮೇಶ್ ಶೆಟ್ಟಿ (ಭಗವತಿ), ಗೌರವ ಸಲಹೆಗಾರರಾದ ಶಿವರಾಮ ಕೇರ್ಪಳ (ಕೆ.ವಿ.ಜಿ.ಪಿ.) ವಿಠಲ ರೈ ಬೂಡು, ಖಜಾಂಜಿ ಮಹಾಬಲ ರೈ ಬೂಡು, ಜತೆ ಕಾರ್ಯದರ್ಶಿಗಳಾದ ಕುಸುಮಾಧರ ರೈ ಬೂಡು, ವಿಜಯಕುಮಾರ್ ಕುರುಂಜಿಗುಡ್ಡೆ ಉಪಸ್ಥಿತರಿದ್ದರು.ಸದಸ್ಯ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.