ಸುಳ್ಯ:ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಳೆ(ಜೂ.30) ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಸುಳ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಸಂಸದರಾಗಿ ಆಯ್ಕೆಯಾದ ಬಳಿಕ ಅವರು ಸುಳ್ಯಕ್ಕೆ ಆಗಮಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಅವರು ಸುಳ್ಯಕ್ಕೆ ಆಗಮಿಸಿ ಮಂಡಲದ
ಪ್ರಮುಖರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ‘ಸುಳ್ಯ ಮಿರರ್’ಗೆ ತಿಳಿಸಿದ್ದಾರೆ.
ಲೋಕ ಸಭಾ ಅಧಿವೇಶನ ಇದ್ದ ಕಾರಣ ಮೊನ್ನೆ ತಾನೆ ನಡೆದ ಬಿಜೆಪಿ ನೂತನ ಕಚೇರಿ ಉದ್ಘಾಟನೆಗೆ ಆಗಮಿಸಿರಲಿಲ್ಲ. ಅದಕ್ಕಿಂತ ಮೊದಲು ಆಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭವೂ ಮುಂದೂಡಲಾಗಿತ್ತು.