ಸುಳ್ಯ:ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿ ವತಿಯಿಂದ ಸುಳ್ಯ ನಗರದಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮತ ಯಾಚನೆ ಮಾಡಲಾಯಿತು. ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡ ಮತಯಾಚನೆ ಕಾರ್ಯಕ್ರಮ ನಗರದಲ್ಲಿ ಸಾಗಿ ಗಾಂಧಿನಗರದ ತನಕ ಅಂಗಡಿ ಮುಂಗಟ್ಟುಗಳಲ್ಲಿ ಮನವಿ ಪತ್ರ, ಬಿಜೆಪಿ ಅಭ್ಯರ್ಥಿಯ

ಪರಿಚಯ ಪತ್ರ ನೀಡಿ ಮತ ಯಾಚನೆ ಮಾಡಲಾಯಿತು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಡಲ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಉಪಾಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಜಿಲ್ಲಾ

ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್, ಯುವಮೋರ್ಚಾ ಪ್ರಮುಖರಾದ ಸುನಿಲ್ ಕೇರ್ಪಳ,ಮನುದೇವ್ ಪರಮಲೆ, ಪ್ರದೀಪ್ ಕೊಲ್ಲರಮೂಲೆ, ದಿಲೀಪ್, ರಂಜಿತ್, ಲೋಹಿತ್ ಮಾವಿನಕಟ್ಟೆ, ನಿಕೇಶ್ ಉಬರಡ್ಕ, ಸುದರ್ಶನ ಪಾತಿಕಲ್ಲು, ಅವಿನ್ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು









