ಕಲ್ಲಪಳ್ಳಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗಡಿ ಪ್ರದೇಶವಾದ ಪನತ್ತಡಿ ಪಂಚಾಯತ್ನ ಏಳನೇ ವಾರ್ಡ್ ಕಲ್ಲಪಳ್ಳಿಯಲ್ಲಿ
ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಾಹನ ಮೆರವಣಿಗೆಯಲ್ಲಿ
ವಿಜೇತ ಅಭ್ಯರ್ಥಿಗಳಾದ ಭವ್ಯ ಜಯರಾಜ್, ವೇಣುಗೋಪಾಲ್, ಶಿಬು ಅವರನ್ನು ವಾಹನ ಮೆರವಣಿಗೆಯಲ್ಲಿ ಕರೆ ತರಲಾಯಿತು. ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.ಬಿಜೆಪಿ ಅಭ್ಯರ್ಥಿ ಭವ್ಯ ಜಯರಾಜ್ 173 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ 3ನೇ ವಾರ್ಡ್ನಲ್ಲಿ ವೇಣುಗೋಪಾಲ್, 8ನೇ ವಾರ್ಡ್ನಲ್ಲಿ ಶಿಬು ಜಯ ಗಳಿಸಿದ್ದರು.













