ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಕುದ್ಮಾರು, ಕ್ಯಾಮಣ, ಬೆಳಂದೂರು,ಕಾಣಿಯೂರು, ಕಳುವಾಜೆ,ಹೇಮಲ,ಚಾರ್ವಕ,ಕುಂಬ್ಲಾಡಿ,ಕೆಳಗಿನ ಕೇರಿ,ಕೊಪ್ಪ, ಸೊಂಪಾಡಿ, ನೆರೊಲ್ತಡ್ಕ, ಪುಂಚಪ್ಪಾಡಿ, ಕುದ್ಮಾರು,ವಿವಿಧ
ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು. ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು. ಸಂದರ್ಭದಲ್ಲಿ ಮಂಡಲ ಪ್ರಮುಖರಾದ
ರಾಕೇಶ್ ರೈ ಕೆಡೆಂಜಿ, ವಿಸ್ತಾರಕ ರಾಘವೇಂದ್ರ, ,ವಿನಯ್ ಕುಮಾರ್ ಮುಳುಗಾಡು,ಗಣೇಶ್ ಉದನಡ್ಕ,ಅನೂಪ್ ಅಳ್ವಾ, ಪ್ರಸಾದ್ ಕಾಟೂರು,ಹಾಗೂ ಮಹಾಶಕ್ತಿ ಕೇಂದ್ರ ಪ್ರಮುಖರು,ಶಕ್ತಿ ಕೇಂದ್ರ ಪ್ರಮುಖರು,ಬೂತ್ ಸಮಿತಿಯ ಪ್ರಮುಖರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.