ಮಂಗಳೂರು: ಮತ ಎಣಿಕೆ ಕಾರ್ಯ ಮುಂದುವರಿಯುತ್ತಿದ್ದಂತೆ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂರು ಸುತ್ತು ಕೊನೆಗೊಂಡಾಗ ಭಾಗೀರಥಿ ಮುರುಳ್ಯ 1545 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾಗೀರಥಿ 14,883 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 13,338 ಮತ ಪಡೆದಿದ್ದಾರೆ. ಮೂರನೇ ಸುತ್ತಿನಲ್ಲಿ ಬಿಜೆಪಿಗೆ 4886 ಮತ ಹಾಗೂ ಕಾಂಗ್ರೆಸ್ಗೆ 4442 ಮತ ದೊರಕಿದೆ.ಎರಡನೇ ಸುತ್ತಿನಲ್ಲಿ ಭಾಗೀರಥಿ ಮುರುಳ್ಯ 4496 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 4997 ಮತ ಪಡೆದಿದ್ದಾರೆ.