ಮಂಗಳೂರು: ಮತ ಎಣಿಕೆ ಕಾರ್ಯ ಮುಂದುವರಿಯುತ್ತಿದ್ದಂತೆ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 5501 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 3969 ಮತ ಪಡೆದಿದ್ದಾರೆ. ಮೊದಲ ಸುತ್ತು ಮುಗಿದಾಗ ಭಾಗೀರಥಿ ಮುರುಳ್ಯ 1540 ಮತದ ಬಹುಮತ ಸಾಧಿಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ 55, ಆಪ್ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ 44 ಮತ ಪಡೆದಿದ್ದಾರೆ. ನೋಟಾಕ್ಕೆ 96 ಮತ ಬಿದ್ದಿದೆ.