ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸುಗೊಂಡಿದೆ. ವಿವಿಧ ಬೂತ್ಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಕ್ಷೇತ್ರದ ಕೆಲವು ಬೂತ್ಗಳಲ್ಲಿ ಮತ ಯಂತ್ರದ
ದೋಷಗಳಿಂದಾಗಿ ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಯಿತು. ಉಳಿದಂತೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರಿದಿದೆ.ಬೆಳ್ಳಾರೆ, ಎಡಮಂಗಲ, ಬಾಳಿಲ, ಐವರ್ನಾಡು, ಸೋಣಂಗೇರಿ, ಸುಳ್ಯ ನಗರ ಸೇರಿದಂತೆ ವಿವಿಧ ಬೂತ್ಗಳಲ್ಲಿ ರಶ್ ಕಂಡು ಬಂದಿದೆ. ಉದ್ದನೆಯ ಸರತಿ ಸಾಲು ಇತ್ತು. ಕೆಲವು ಬೂತ್ಗಳಲ್ಲಿ ಸರತಿ ಸಾಲು ಕಡಿಮೆ ಇತ್ತು.ಕೆಲವು ಬೂತ್ಗಳಲ್ಲಿ ಬೆಳಿಗ್ಗೆ ರಶ್ ಕಂಡು ಬಂದಿದ್ದರೂ ಬಳಿಕ ರಶ್ ಕಡಿಮೆಯಾಯಿತು.
ಬೂತ್ಗಳ ಹೊರ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ಗಳ ಬೂತ್ಗಳು ಇದ್ದು ಪ್ರಮುಖ ಕಾರ್ಯಕರ್ತರು, ಮುಖಂಡರು ಆಯಾ ಭಾಗದ ಬೂತ್ಗಳಲ್ಲಿ ಇದ್ದರು. ಎಲ್ಲೆಡೆ ಬಿಗು ಭದ್ರತೆಯೂ ಕಂಡು ಬಂದಿತ್ತು.