ಬೆಂಗಳೂರು: ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ರೋಚಕ ಜಯ ದಾಖಲಿಸಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 32-30 ಅಂತರದಲ್ಲಿ ಬೆಂಗಳೂರು ಬುಲ್ಸ್ ಗೆದ್ದು ಬೀಗಿದೆ. ಈ ಮೂಲಕ ಬುಲ್ಸ್ 4 ಸೋಲಿನ ಬಳಿಕ ಸತತ ಎರಡು ಜಯ ದಾಖಲಿಸಿದೆ.ಇನ್ನೊಂದು ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ರೋಚಕ ಜಯ ದಾಖಲಿಸಿದೆ. ತಮಿಳು ತಲೈವಾಸ್ ತಂಡ 38-36 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್ ತಂಡದ ವಿರುದ್ಧ ಗೆಲುವು ದಾಖಲಿಸಿದೆ.










