ಬೆಂಗಳೂರು: ಸತತ ನಾಲ್ಕು ಸೋಲಿನ ಬಳಿಕ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಯುಪಿ ಯೋಧಾಸ್ ತಂಡವನ್ನು 38-36 ಅಂತರದಲ್ಲಿ ಪರಾಭವಗೊಳಿಸಿ ಮೊದಲ ಗೆಲುವಿನ ನಗೆ ಬೀರಿತು. ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 35-32 ಸ್ಕೋರ್ ಅಂತರದಲ್ಲಿ ಸೋಲಿಸಿತು. ಟೂರ್ನಿಯಲ್ಲಿ 5 ಪಂದ್ಯ ಆಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಎರಡನೇ ಸೋಲಾಗಿದೆ.









