ಕಲ್ಲಪಳ್ಳಿ: ಗಡಿ ಪ್ರದೇಶವಾದ ಕಲ್ಲಪ್ಪಳ್ಳಿಯ ಬಾಟೋಳಿ- ಕಮ್ಮಾಡಿ ರಸ್ತೆಯ ಕಾಮಗಾರಿ ಕುರಿತು ಪರಿಶೀಲನಾ ಸಭೆ ಹೊಸದುರ್ಗ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆಯಿತು. ರಸ್ತೆ ಅಭಿವೃದ್ಧಿಯ ಎಸ್ಟಿಮೇಟ್, ಲೈನ್ ಮತ್ತು ಕಂಬಗಳನ್ನು ಬದಲಾಯಿಸುವುದು ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ರಸ್ತೆಯ
ಕೆಲವು ಭಾಗ ಅಭಿವೃದ್ಧಿಗೆ ಉಳಿದರೆ ಅದನ್ನು ಕೆಡಿಪಿ ಅನುದಾನದಲ್ಲಿ ಅಭಿವೃದ್ಧಿ ಪೂರ್ತಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ, ಕಾಞಂಗಾಡ್ ಶಾಸಕರಾದ ಇ. ಚಂದ್ರಶೇಖರನ್, ಕಾಞಂಗಾಡ್ ಸಬ್ ಕಲೆಕ್ಟರ್ ಸುಫಿಯಾನ್ ಅಹಮ್ಮದ್, ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಕೆಡಿಪಿ ಸ್ಪೆಷಲ್ ಆಫೀಸರ್ ಚಂದ್ರನ್, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಪನತ್ತಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಕಲ್ಲಪಳ್ಳಿ, ಪನತ್ತಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಇಂಜಿನಿಯರ್ಗಳು, ಕೆಎಸ್ಇಬಿ ಇಂಜಿನಿಯರ್ ಗಳು, ಮಾಜಿ ಪಂಚಾಯತ್ ಅಧ್ಯಕ್ಷ ಪಿ.ಜಿ ಮೋಹನ್. ಹಾಗೂ ಪಿ,ತಂಬಾನ್. ಚಿದಾನಂದ ಜಿ. ಕಾರ್ಯಪ್ಪ ಪಿ.ಆರ್. ಮತ್ತಿತರರು ಭಾಗವಹಿಸಿದ್ದರು.