ಬನಾರಿ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ರ ಸಂಭ್ರಮದ ಪ್ರಯುಕ್ತ ಶ್ರೀ ರಾಮ ದರ್ಶನ” ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ಭಾಗವತಿಕೆಯನ್ನು ಮೋಹನ ಮೆಣಸಿನಕಾನ ಮತ್ತು
ನಿತೀಶ್ ಕುಮಾರ್ ಎಂಕಣ್ಣಮೂಲೆ,ಚೆಂಡೆಮದ್ದಳೆ ವಾದಕರಾಗಿ ಶ್ರೀಧರ ಆಚಾರ್ಯ ಈಶ್ವರಮಂಗಲ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ನಡೆಸಿಕೊಟ್ಟರು.ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ ಮಂಜೇಶ್ವರ, ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಸದಾಶಿವ ರೈ ಬೆಳ್ಳಿಪ್ಪಾಡಿ, ರಮಾನಂದ ರೈ ದೇಲಂಪಾಡಿ ಅವರು ಭಾಗವಹಿಸಿ ತಾಳಮದ್ದಳೆಯ ಯಶಸ್ಸಿಗೆ ಪಾತ್ರರಾದರು.ಐತಪ್ಪ ಗೌಡ ಮುದಿಯಾರು ವಂದಿಸಿದರು.