ಬಾಳುಗೋಡು:ಪುತ್ತೂರಿನಿಂದ ಬಾಳುಗೋಡು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ಸುಗಳು ಇನ್ನು ಮುಂದೆ ಬಾಳುಗೋಡಿನಿಂದ ಒಂದು ಕಿಮೀ ಮುಂದುವರೆದು ಬೆಟ್ಟುಮಕ್ಕಿ – ಪುಣೇರಿ ಕಾಲನಿ ತನಕ ಸಂಚರಿಸಲಿದೆ. ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ ಸೆ.28ರಂದು ವಿಸ್ತೃತ ರೂಟ್ಗೆ ಚಾಲನೆ ನೀಡಲಾಯಿತು.ಬಾಳುಗೋಡು ಗ್ರಾಮದ
ಹಿರಿಯ ಕಾಂಗ್ರೆಸ್ ಮುಖಂಡರಾದ ದಯಾನಂದ ಕಟ್ಟೆಮನೆ ರಿಬ್ಬನ್ ಕತ್ತರಿಸುವ ಮೂಲಕ ಸ್ವಾಗತಿಸಿದರು. ಸುಳ್ಯದ ಕಾಂಗ್ರೆಸ್ ಹಿರಿಯ ಮುಖಂಡರಾದ ಬೆಟ್ಟ ಜಯರಾಮ್ ಭಟ್ ನೇತೃತ್ವದಲ್ಲಿ ಬಸ್ ಮಾರ್ಗ ಮುಂದುವರೆಸುವಂತೆ ಪ್ರಯತ್ನ ನಡೆಸಿದ್ದರು. ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರವಿ ಕುಮಾರ್ ಕಿರಿಭಾಗ ಮತ್ತು ಹಿರಿಯರಾದ ಹೊನ್ನಪ್ಪ ಗೌಡ ಕುಡುಮುಂಡೂರು ಹಸಿರು ನಿಶಾನೆ ತೋರುವ ಮೂಲಕ ಬಸ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶೈಲೇಶ್ ಕಟ್ಟೆಮನೆ, ಗಿರೀಶ್ ಕಟ್ಟೆಮನೆ, ಚೇತನ್ ಕಜೆಗದ್ದೆ, ಅನಂತಾರಾಮ ಆಲ್ಕಬೆ, ಪ್ರಧಾನ್ ಕಟ್ಟೆಮನೆ, ಪ್ರಮೋದ್ ಕಟ್ಟೆಮನೆ, ಜಯಂತ್ ಶಿವಾಲ, ಸುಂದರ ಗೌಡ ಕಿರಿಭಾಗ, ಪ್ರಭಾಕರ ಬಾಳುಗೋಡು, ಬೇಬಿ ಯಶ್ವಿತಾ ಬಾಳುಗೋಡು, ವಸಂತ ಗೌಡ ಮುಚ್ಚಾರ, ಧರ್ಮಪಾಲ್ ಮುಚ್ಚಾರ, ಶಶಿಧರ ಮುಚ್ಚಾರ, ಕರುಣಾಕರ ಪೊಯ್ಯೆಗದ್ದೆ, ನೇಮಿರಾಜ ಅಂತಿಬೆಟ್ಟು, ದಶರಥ ಶಿವಾಲ, ಸುಖೇಶ್ ಚೈಪೆ, ರಾಜೇಶ್ ಕಿರಿಭಾಗ, ಅರುಣ್ ಕಟ್ಟೆಮನೆ, ಹೊನ್ನಪ್ಪ ಗೌಡ ಪೊಯ್ಯೆಗದ್ದೆ, ಸುರೇಶ್ ಕಿರಿಭಾಗ, ರಮೇಶ್ ಚೈಪೆ, ಜಯರಾಮ ಮುಂಡೋಕಜೆ, ಆನಂದ ಬೆದ್ರುಪಣೆ ಜಯಂತ ಪೊಯ್ಯೆಗದ್ದೆ, ಬಾಲಕೃಷ್ಣ ಶಿವಾಲ , ವಸಂತ ಶಿವಾಲ, ಕುಶಾಲಪ್ಪ ಕಾಂತುಕುಮೇರಿ ಮತ್ತಿತರರು ಉಪಸ್ಥಿತರಿದ್ದರು. ಬಾಳುಗೋಡು ಗ್ರಾಮದ ಪದಕ ಎಂಬಲ್ಲಿಂದ ಪುಣೇರಿ ಕಾಲನಿಯವರೆಗೆ ಬಸ್ ಮುಂದುವರೆಸಬೇಕೆಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿತ್ತು.