ಸುಳ್ಯ: ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮಕ್ಕೆ ಸುಳ್ಯದಿಂದ ಕೆ ಎಸ್ ಆರ್ ಟಿ ಸಿ ಬಸ್ಸು ಸೌಲಭ್ಯ ಪ್ರಾರಂಭ ಗೊಂಡಿದೆ.ಬೆಳಿಗ್ಗೆ 7.05ಕ್ಕೆ ಬಾಳುಗೋಡು – ಸುಳ್ಯ, ಸಂಜೆ 5.20ಕ್ಕೆ ಸುಳ್ಯದಿಂದ ಬಾಳುಗೋಡು ಮಾರ್ಗದಲ್ಲಿ ಬಸ್ ಸಂಚರಿಸಲಿದೆ.ಬಸ್ ಸಂಚಾರ ಕಾಂಗ್ರೆಸ್ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಯತ್ನದಿಂದ ಆಗಿದೆ ಎಂದು
ಕಾಂಗ್ರೆಸ್ ಹೇಳಿದರೆ, ನಮ್ಮ ಪ್ರತಿಭಟನೆಗೆ ಸಂದ ಜಯ ಎಂದು ಎಬಿವಿಪಿ ಹೇಳಿದೆ.
ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಬಸ್ಗೆ ಸ್ವಾಗತ ನೀಡಲಾಯಿತು ಹಮ್ಮಿಕೊಂಡರು. ಜಯರಾಮ ಗೌಡ ಆಲ್ಕಬೆ, ಶಿಶಿರ್ ಕಟ್ಟೆಮನೆ, ಗ್ಯಾರಂಟಿ ಸಮಿತಿ ಸದಸ್ಯರಾದ
ಮಣಿಕಂಠ ಕೊಳಗೆ ಮತ್ತು ವಿಜೇಶ್ ಹಿರಿಯಡ್ಕ ಮಾತನಾಡಿದರು.ಸುರೇಂದ್ರ ಕಾಯರ, ಅನಂತರಾಮ ಆಲ್ಕಬೆ, ಸುಂದರ ಪುಣೇರಿ ಸುಂದರ ಬೆಟ್ಟುಮಕ್ಕಿ,ವಸಂತಕುಮಾರ್ ಶಿವಾಲ,
ಗೋಪಾಲಕೃಷ್ಣ ಪೊಯ್ಯಗದ್ದೆ,ಕರುಣಾಕರ್ ಪೊಯ್ಯಗದ್ದೆ
ತೇಜಕುಮಾರ್ ತಳೂರು ಇದ್ದರು.
ಬಾಳುಗೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಕಿರಿಭಾಗ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಶ್ರಮ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಪ್ರಯತ್ನದಿಂದ ಬಸ್ ಆರಂಭ ಆಗಿದೆ ಎಂದು ಗ್ಯಾರಂಟಿ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದ ವತಿಯಿಂದ ನಡೆಸಿದ ಪ್ರತಿಭಟನೆಗೆ ಫಲವಾಗಿ, ಶಾಸಕಿ ಭಾಗೀರಥಿ ಮುರುಳ್ಯ ಅವರ ಶ್ರಮದ ಫಲವಾಹಿ ಬಾಳುಗೋಡು ಮಾರ್ಗಕ್ಕೆ ಬಸ್ಸು ಸೇವೆ ಪ್ರಾರಂಭವಾಗಿದೆ. ಇದು ಸ್ವಾಗತಾರ್ಹ ಎಂದು ಎಬಿವಿಪಿ ನಗರ ಘಟಕ ಪ್ರಕಟಣೆ ಹೇಳಿದೆ.





