ಕಡಬ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಅಲಂಗಾರು, ಕುಟ್ರುಪ್ಪಾಡಿ, ಕುಂತೂರು, ಪೆರಾಬೆ, ಅಲಂಕಾರು, ರಾಮಕುಂಜ, ಕೊಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ನೀಡಿ ಮತ ಯಾಚನೆ ನಡೆಸಲಾಯಿತು. ಪ್ರಮುಖರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಮತ ಯಾಚನೆ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಜೊತೆಯಲ್ಲಿದ್ದರು.