ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,
V4 ನ್ಯೂಸ್ ಚಾನೆಲ್ ಮತ್ತು ಎಂಬಿ ಫೌಂಡೇಶನ್ನ ಸಹಯೋಗದಲ್ಲಿ ‘ಅರೆಭಾಷೆ ಕಾಮಿಡಿ’ ರಿಯಾಲಿಟಿ ಶೋದ ತಂಡಗಳ ಕೊನೆಯ ಸುತ್ತಿನ ಆಯ್ಕೆಗೆ ಫೈನಲ್ ಆಡಿಷನ್ ಸುಳ್ಯ ಕೊಡಿಯಾಲಬೈಲ್ನ ಗೌಡ ಸಮುದಾಯ ಸಭಾಭವನದ ಸಭಾಂಗಣದಲ್ಲಿ ಎ.27 ರಂದು ನಡೆಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅರೆಭಾಷೆ ಅಕಾಡೆಮಿಯು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಲವಾರು ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ. ಇದೀಗ ಅರೆಭಾಷೆ ಕಾಮಿಡಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತಿದೆ. ಅರೆಭಾಷೆ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಲು ಉತ್ತಮ ಅವಕಾಶ. ಅರೆಭಾಷೆ ಎಲ್ಲರಿಗೂ ಮುಟ್ಟುವ ಮತ್ತು ಸರ್ವ ವ್ಯಾಪಿಯಾಗುವ ಕಾರ್ಯಕ್ರಮ ಎಂದು ಹೇಳಿದರು.

ಅರೆಭಾಷೆ ಅಲಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ವಿನೋದ್ ಮೂಡಗದ್ದೆ, ವಿ4 ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್, ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ವಿ4 ನ್ಯೂಸ್ನ ಪ್ರಾದೇಶಿಕ ಸುದ್ದಿ ಸಂಪಾದಕ ಪುಷ್ಪರಾಜ್ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕರ್ನಾಟಕ ಸಹಕಾರ ಮಹಾ ಮಂಡಳಗಳ ನಿರ್ದೇಶಕ ಚಂದ್ರಾ ಕೋಲ್ಚಾರ್, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಎಂಜಿಎಂ ಶಾಲೆಯ ಸಂಚಾಲಕ ದೊಡ್ಡಣ್ಣ ಬರೆಮೇಲು, ಜಯಪ್ರಕಾಶ್ ಕುಕ್ಕೇಟಿ, ದೀಪಿಕಾ ಅಡ್ತಲೆ ಮತ್ತಿತರರು ಉಪಸ್ಥಿತರಿದ್ದರು. ಫೆ.16ರಂದು ನಡೆದ ಪ್ರಥಮ ಹಂತದ ಆಡಿಷನ್ನಲ್ಲಿ ಭಾಗವಹಿಸಿದ ತಂಡಗಳು ಹಾಗೂ ಹಾಗೂ ಹೊಸ ತಂಡಗಳು ಸೇರಿದಂತೆ ವಿವಿಧ ತಂಡಗಳು ಫೈನಲ್ ಆಡಿಷನ್ನಲ್ಲಿ ಭಾಗವಹಿಸಿದ್ದವು.






