ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರು ಅಕಾಡೆಮಿಯ ಪ್ರಥಮ ಅಧ್ಯಕ್ಷರಾದ ದಿವಂಗತ ದೇವಿಪ್ರಸಾದ್ ಸಂಪಾಜೆಯವರ ಮನೆಗೆ ಭೇಟಿ ನೀಡಿ ಅವರ ಪತ್ನಿ ಇಂದಿರಾ ದೇವಿಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ
ಅಧ್ಯಕ್ಷರು ಹಾಗೂ ಸದಸ್ಯರನ್ನು ಬರಮಾಡಿಕೊಂಡ ಇಂದಿರಾ ದೇವಿಪ್ರಸಾದ್ ಅವರು ಹೊಸ ಸಮಿತಿಯಿಂದ ಅರೆಭಾಷೆ ಹಾಗೂ ಸಂಸ್ಕೃತಿಗೆ ಉತ್ತಮ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಡಾ. ಎನ್.ಎ. ಜ್ಞಾನೇಶ್ ಹಾಗೂ ಲತಾ ಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.