ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರ ಅಧ್ಯಕ್ಷತೆಯಲ್ಲಿ ‘ಸಮಾಗಮ ಸಭೆಗೆ’ ಉತ್ತಮ ಸ್ಪಂದನೆ ದೊರೆಯಿತು. ನಗರದ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಹಾಗೆಯೇ ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಸೇರಿದಂತೆ
ಹಲವರು ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅಕಾಡೆಮಿ ಮೊದಲ ಸಭೆಯಲ್ಲಿ ಅಕಾಡೆಮಿ ಚಟುವಟಿಕೆ ಸಂಬಂಧಿಸಿದಂತೆ ಕಳೆದ ಎರಡು ಅವಧಿಯಲ್ಲಿನ ಫೆಲೋಶಿಪ್ನ ಪುಸ್ತಕ ಹೊರತರಲು ಬಾಕಿ ಇದ್ದು, ಮೊದಲ ಸಭೆಯಲ್ಲಿಯೇ ಪುಸ್ತಕ ಹೊರತರಲು ನಿರ್ಧರಿಸಲಾಗಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಹಿಂಗಾರ’ ಪುಸ್ತಕವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಹಾಗೆಯೇ 2022-2023 ನೇ ಅವಧಿಯ ಗೌರವ ಪ್ರಶಸ್ತಿ ಮತ್ತು
ಪುಸ್ತಕ ಬಹುಮಾನವನ್ನು ನೀಡಲು ಮೊದಲ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸದಾನಂದ ಮಾವಜಿ ಅವರು ಹೇಳಿದರು.ಈಗಾಗಲೇ ಅಕಾಡೆಮಿ ವತಿಯಿಂದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನವನ್ನು ಸುಳ್ಯದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
‘ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಲೇಖನ, ಕವನ, ನಾಟಕ, ಸಾಕ್ಷ್ಯಚಿತ್ರ ಹೀಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲು ಅಕಾಡೆಮಿ ನಿರ್ಧರಿಸಿದ್ದು, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಹಾಗೂ ದಾಖಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.’ ಕರ್ನಾಟಕ ಹೆಸರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ನಾಲ್ಕು ಕಂದಾಯ ವಿಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಮೈಸೂರು ವಿಭಾಗಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ 5 ಭಾಷಾ ಅಕಾಡೆಮಿಗಳು, ಒಂದು ಯಕ್ಷಗಾನ ಅಕಾಡೆಮಿ ಸೇರಿ ಸೆಪ್ಟೆಂಬರ್, 24 ಮತ್ತು 25 ರಂದು ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಅಕಾಡೆಮಿ ಕಾರ್ಯಚಟುವಟಿಕೆಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ನಿರ್ದೇಶಕರು ನೀಡಿರುವ ಸಲಹೆಗೆ ಪೂರಕವಾಗಿ ಕಾರ್ಯಕ್ರಮ ಹಾಗೂ ಪುಸ್ತಕ ಪ್ರಕಟಣೆ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದರು.
ಅಕಾಡೆಮಿ ಮಾಜಿ ಅಧ್ಯಕ್ಷರಾದ ಪಿ.ಸಿ.ಜಯರಾಮ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಕೊಲ್ಯದ ಗಿರೀಶ್ ಹಿಂಗಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ,ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೆರಿಯನ ಜಯಾನಂದ,ಮೈಸೂರು ಗೌಡ ಸಮಾಜದ ಕೊಂಬಾರನ ಬಸಪ್ಪ,, ಸುಳ್ಯ ತಾಲ್ಲೂಕಿನ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ,
ಪುದಿಯನೆರವನ ರೇವತಿ ರಮೇಶ್,ಬಾರಿಯಂಡ ಜೋಯಪ್ಪ, ಅಕಾಡೆಮಿ ಮಾಜಿ ಸದಸ್ಯರಾದ ಎ.ಟಿ.ಕುಸುಮಾಧರ,ಪುರುಷೋತ್ತಮ ಕಿರ್ಲಾಯ,
ಜಯಪ್ರಕಾಶ್ ಮೋಂಟಡ್ಕ, ಕೋರನ ಸರಸ್ವತಿ, ಚಂಡೀರ ಬಸಪ್ಪ ,ಸೂದನ ಈರಪ್ಪ,ಅಕಾಡೆಮಿ ಸದಸ್ಯರಾದ ಜ್ಞಾನೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಮಾತನಾಡಿದರು. ಪ್ರಮುಖರಾದ ತುಂತಜೆ ಗಣೇಶ್, ನವೀನ್ ಅಂಬೆಕಲ್ಲು, ಚಿಲ್ತಡ್ಕ ಪರಶುರಾಮ, ಸುರೇಶ್ ಅಮೈ, ಕೆ.ಟಿ.ವಿಶ್ವನಾಥ, ಎ.ಕೆ.ಹಿಮಕರ, ಸದಸ್ಯರಾದ ತೇಜಕುಮಾರ್ ಕುಡೆಕಲ್ ಹಾಗೂ ಪಿ.ಎಸ್.ಕಾರ್ಯಪ್ಪ ಇದ್ದರು. ಸದಸ್ಯರಾದ ಸಂದೀಪ್ ಪುಳಕಂಡ್ರ, ಲೋಕೇಶ್ ಊರುಬೈಲು ಅವರು ಅರೆಭಾಷಿಕ ಸಂಘಟಕರನ್ನು ಗೌರವಿಸಿದರು. ಸದಸ್ಯರಾದ ಚಂದ್ರಶೇಖರ್ ಪೆರಾಲು ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ ಅವರು ನಿರೂಪಿಸಿದರು, ವಿದೂಷಿ ಕಾವ್ಯಶ್ರೀ ಕಪಿಲ್ ಪ್ರಾರ್ಥಿಸಿದರು, ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.