ಸುಳ್ಯ:ಖ್ಯಾತ ಚಲನಚಿತ್ರ ಅರವಿಂದ್ ಬೋಳಾರ್ ಅವರು ಬೆಂಗಳೂರಿಗೆ ತೆರಳುವ ಮಧ್ಯೆ ಸುಳ್ಯ ಗಾಂಧಿನಗರದ ಮೆಟ್ರೋ ಹೋಟೆಲ್ನಲ್ಲಿ ಊಟ ಸವಿದು ತೆರಳಿದರು. ಈ ಸಂದರ್ಭದಲ್ಲಿ ಹಲವು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆ ಪೊಟೋ, ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮಿಸಿದರು. ಅರವಿಂದ ಬೋಳಾರ್ ಆಗಮಿಸಿದ್ದು ತಿಳಿದು ಹಲವಾರು ಮಂದಿ
ವೀಡಿಯೋ ವೀಕ್ಷಿಸಿ: The Sullia mirror YouTube channel
ಆಗಮಿಸಿದ್ದರು. ಮೆಟ್ರೋದಲ್ಲಿ ಬಿರಿಯಾಣಿ ಸವಿದು ಅರವಿಂದ್ ಬೋಳಾರ್ ತೆರಳಿದರು. ಅರವಿಂದ ಬೋಳಾರ್ ಜೊತೆ ಪತ್ರಕರ್ತರಾದ ವಾಲ್ಟರ್ ನಂದಳಿಕೆ, ದಯಾನಂದ ಕುಕ್ಕಾಜೆ ಇದ್ದರು. ದಾಯ್ಜಿವಲ್ಡ್ ಚಾನೆಲ್ನಲ್ಲಿ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅವರು ಸುಳ್ಯದಲ್ಲಿ ಊಟ ಮಾಡಿ ತೆರಳಿದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಶಿಯಾನ್ ದರ್ಬೆ, ಮನ್ಸೂರ್ ಮೆಟ್ರೋ, ಮುನಾವರ್ ಮೆಟ್ರೋ ಮತ್ತಿತರರು ಸೇರಿ ಸ್ವಾಗತಿಸಿದರು.