ಅರಂತೋಡು:ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಮೂಗುತಿಹಳ್ಳಿ ಪ್ಯಾಕ್ಸ್ ಇದರ ಅಧ್ಯಕ್ಷರಾದ ಆನಂದ ಸಿ. ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಚ್.ಎಂ ಹಾಗು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಬೀಕನಹಳ್ಳಿ ಪ್ಯಾಕ್ಸ್ ಅಧ್ಯಕ್ಷರಾದ ಸೋಮಶೇಖರಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಅವರು ಅಧ್ಯಯನ ಪ್ರವಾಸ ನಿಮಿತ್ತ ಭೇಟಿ ನೀಡದರು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಹಾಗೂ
ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಸಮೃದ್ಧಿ ಮಾರ್ಟ್, ಎಸ್.ಎಮ್.ಎಸ್. ಸರ್ವೀಸ್, ಗಣಕೀಕೃತ ಸಾಲದ ಅರ್ಜಿಗಳು, ಇ-ಸ್ಟ್ಯಾಂಪ್ ಆಂಬ್ಯುಲನ್ಸ್ ಬಗ್ಗೆ ಮಾಹಿತಿಯನ್ನು ಪಡಕೊಂಡರು. ಸಂಘದ ವತಿಯಿಂದ ಮೂಗುತಿಹಳ್ಳಿ ಪ್ಯಾಕ್ಸ್ ಇದರ ಅಧ್ಯಕ್ಷರಾದ ಆನಂದ ಸಿ. ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಚ್.ಎಮ್. ಹಾಗು ಬೀಕನಹಳ್ಳಿ ಪ್ಯಾಕ್ಸ್ ಅಧ್ಯಕ್ಷರಾದ ಸೋಮಶೇಖರಪ್ಪ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ವಿಜೇತ್ ಮರುವಳ, ಸೋಮಯ್ಯ ಅಡ್ಯಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಅಟೋಮೇಷನ್ ಸಿಬ್ಬಂದಿ ದೀಕ್ಷಿತ್ ಮುಡಿಪು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.









