ಸುಳ್ಯ:ಅಜ್ಜಾವರದಲ್ಲಿ ಜೀಪು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ಮೂರ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿಗಳಾದ ವಿನಾಯಕ ಮೂರ್ತಿ ಹಾಗೂ
ಪತ್ನಿ ಮಂಜುಳ ಗಂಭೀರ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಮೂರ್ತಿ ಮೃತರಾಗಿರುವುದಾಗಿ ತಿಳಿದುಬಂದಿದೆ. ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿರುವ ವಿನಾಯಕ ಮೂರ್ತಿ ಹಾಗೂ ಮಂಜುಳಾ ದಂಪತಿ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿರುವಾಗ ಅಜ್ಜಾವರ ದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳದಿಂದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತರಲಾಗಿತ್ತು. ಮೃತರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.