ಅಜ್ಜಾವರ:ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ, ಯೋಗಾಸನದ ಮಹತ್ವವನ್ನು, ಇತಿಹಾಸವನ್ನು ಮಕ್ಕಳಿಗೆ ಹೇಳಲಾಯುತು.ವಿದ್ಯಾರ್ಥಿನಿಯರಾದ
ಫಸ್ ಮಿಲ ಮತ್ತು ಫಹೀಮ ಯೋಗದ ಮಹತ್ವ ತಿಳಿಸಿ ಕೊಟ್ಟರು.ರಾಹಿಲಾ ಮತ್ತು ಮುಸ್ಫಿರ ಸರಳ ಹಾಸನಗಳ ಪ್ರತ್ಯಕ್ಷಿಕೆ ತೋರಿಸಿದರು.
ಶಿಕ್ಷಕಿಯರಾದ ಸುಗಂಧಿ, ನರ್ಮದಾ, ಸುರೇಖಾ, ಕಲಾವತಿ ಮತ್ತು ಸ್ವಪ್ನ ಅವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡಿದರು.