ಬೆಂಗಳೂರು:ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆ ಮಾಡಲಾಗಿರುವ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಭೂಮಿ, ಚಂದ್ರನ ಜೊತೆ ತೆಗೆದ
ಸೆಲ್ಫಿ ಗಮನ ಸೆಳೆದಿದೆ.ಈ ಚಿತ್ರವನ್ನು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದೆ. ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು
ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ತನ್ನದೇ ಸೆಲ್ಫಿ ತೆಗೆದುಕೊಂಡಿದೆ. ಅದರಲ್ಲಿ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ಹೇಳಿದೆ.
ಸೆಪ್ಟೆಂಬರ್ 2ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯನ ಅಧ್ಯಯನಕ್ಕಾಗಿ‘ಆದಿತ್ಯ-ಎಲ್ 1’ ಉಡಾವಣೆ ಮಾಡಲಾಗಿತ್ತು. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಗೊತ್ತುಪಡಿಸಿದ L1 ಪಾಯಿಂಟ್ (ಲ್ಯಾಗ್ರೇಂಜ್ ಪಾಯಿಂಟ್ 1) ಗುರಿಯನ್ನು ತಲುಪಲು 125 ದಿನಗಳ ಪ್ರಯಾಣದ ಮಾಡಲಿದೆ