ಸುಳ್ಯ: ಒಂದೊಮ್ಮೆ ಇಳಿಕೆಯಾಗಿ ತಲ್ಲಣ ಮೂಡಿಸಿದ್ದ ಅಡಿಕೆ ಮಾರುಕಟ್ಟೆ ದರ ಇದೀಗ ಕೆಲವು ದಿನಗಳಿಂದ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆಯಲ್ಲಿ ನಿರಂತರ ಏರಿಕೆಯಾಗಿದೆ. ಸುಳ್ಯ ನಗರದಲ್ಲಿ ಹೊಸ ಅಡಿಕೆಗೆ ಕೆಜಿ 330-335 ರೂ ಧಾರಣೆ ಇದೆ. ಹಳೆ ಅಡಿಕಗೆ ಸಿಂಗಲ್ ಚೋಲ್ 430, ಡಬಲ್ ಚೋಲ್ 440 ರೂಗಳಿಗೆ ಖರೀದಿಸಲಾಗುತ್ತದೆ.ಕ್ಯಾಂಪ್ಕೋ ಹೊಸ ಅಡಿಕೆಯ
ದರ 340-350ರ ಧಾರಣೆ ಇದೆ. ಹಳೆ ಅಡಿಕೆ ಸಿಂಗಲ್ ಚೋಲ್ 420-428 ಡಬಲ್ ಚೋಲ್ 430-435 ಇದೆ ಎಂದು ಕ್ಯಾಂಪ್ಕೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಒಂದು ವಾರದಿಂದ ಅಡಿಕೆ ಧಾರಣೆ ಏರಿಕೆಯಲ್ಲಿದೆ.
ಮಾರುಕಟ್ಟೆಗೆ ಅಡಿಕೆ ಬರುವುದು ಸ್ವಲ್ಪ ಕಡಿಮೆ ಅಗಿದೆ. ನಿಧಾನವಾಗಿ ಬರುತಿದೆ ಎನ್ನುತ್ತಾರೆ ಸುಳ್ಯದ ಹಿರಿಯ ಅಡಿಕೆ ವ್ಯಾಪಾರಿ ಆದಂ ಹಾಜಿ ಕಮ್ಮಾಡಿ. ಅಡಿಕೆ ಸಿಂಗಲ್ ಚೋಲ್, ಡಬ್ಬಲ್ ಚೋಲ್ ಅಡಿಕೆ ಧಾರಣೆ ಏರಿಕೆ ಕಂಡಿದ್ದು, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20ರೂ. ಏರಿಕೆಯಾಗಿದ್ದರೆ, ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 8 ರಿಂದ 10 ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20ರಿಂದ 25 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20ರಿಂದ 23 ರೂ.ನಷ್ಟು ಏರಿಕೆ ಕಂಡಿದೆ ಎನ್ನುತ್ತಾರೆ ವ್ಯಾಪಾರಿಗಳು









