ಸುಳ್ಯ:ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಮೇ.2 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸಿದರು. ಕಾರ್ನರ್ ಮೀಟಿಂಗ್ಗಳನ್ನು
ನಡೆಸಿದರು.ಸುಳ್ಯ ನಗರದ ಬೂಡು, ಕೇರ್ಪಳ, ಕುರುಂಜಿಬಾಗ್ ಭಸ್ಮಡ್ಕ ಅಲ್ಲದೆ ನೆಲ್ಲಿಕುಮೇರಿ, ದೊಡ್ಡಡ್ಕ ರಾಜರಾಮಪುರ ಕಾಲೋನಿ ಮನೆ ಮನೆ ಪ್ರಚಾರ ನಡೆಸಿದರು.ಕೊನಾಲು, ಶಾಂತಿನಗರ ಅಲಂಕಾರು ಗೊಳಿತೊಟ್ಟು ಎಂಬಲ್ಲಿ ಕಾರ್ನರ್ ಸಭೆ ನಡೆಯಿತು.
ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ರಾಜ್ಯ ಉಪಾಧ್ಯಕ್ಷ ವಿವೇಕಾನಂದ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ಪ್ರತಾಪ್ ರೈ,ವಸಂತ, ಸಿಂಚನ,ಸಂಶುದ್ದೀನ್ ಕೆ.ಎಂ,ಸುರೇಶ್ ಮುಂಡಕಜೆ ಮತ್ತಿತರರು ಉಪಸ್ಥಿತರಿದ್ದರು.