ಬೆಂಗಳೂರು:ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡ 6 ರನ್ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ಬು 4-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ
ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ154 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆಸೀಸ್ ಪರ ಬೆನ್ ಮೆಕ್ಡರ್ಮೋಟ್ 54, ಟ್ರಾವಿಸ್ ಹೆಡ್ 28, ಮ್ಯಾತ್ಯು ವೇಡ್ 22 ರನ್ ಗಳಿಸಿದರು. ಭಾರತದ ಪರ ಮುಖೇಶ್ ಕುಮಾರ್ 3, ರವಿ ಬಿಷ್ಣೋಯ್ ಹಾಗೂ ಹರ್ಚದೀಪ್ ಸಿಂಗ್ ತಲಾ 2 ವಿಕೆಟ್ ಕಿತ್ತರು. ಮೊದಲು ಬ್ಯಾಟ್ ಮಾಡಿದ ಭಾರತದ ಪರ 53 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಟಾಪ್ ಸ್ಕೋರರ್ ಆದರು. ಅಕ್ಷರ್ ಪಟೇಲ್ 31,ಯಶಸ್ವಿ ಜೈಸ್ವಾಲ್ 21, ಜಿತೇಶ್ ಶರ್ಮ 24 ರನ್ ಗಳಿಸಿದರು.












