ರಾಜಕೋಟ್: ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗುವ ನಾಲ್ಕನೇ ಟೆಸ್ಟ್ ಆಡುವ ಭಾರತ ತಂಡದಿಂದ ವಿಶ್ರಾಂತಿ ನೀಡಲಾಗಿದೆ. ಸಂಪೂರ್ಣ ಗುಣಮುಖರಾಗದ ಕಾರಣ ಬ್ಯಾಟರ್ ಕೆ.ಎಲ್. ರಾಹುಲ್ ಅವರು ರಾಂಚಿ ಟೆಸ್ಟ್ಗೂ ಅಲಭ್ಯರಾಗಿದ್ದಾರೆ.ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ. ಬುಮ್ರಾ ಮೂರು ಟೆಸ್ಟ್ ಪಂದ್ಯಗಳಿಂದ
17 ವಿಕೆಟ್ಗಳನ್ನು ಪಡೆದಿದ್ದು, ಭಾರತದ ಪರ ಯಶಸ್ವಿ ಬೌಲರ್ ಆಗಿದ್ದಾರೆ. ಮೂರು ಟೆಸ್ಟ್ಗಳಲ್ಲಿ ಅವರು 80.5 ಓವರುಗಳನ್ನು ಮಾಡಿದ್ದರಿಂದ ಅವರಿಗೆ ವಿಶ್ರಾಂತಿ ನಿರೀಕ್ಷಿತವೇ ಆಗಿತ್ತು.ಸರಣಿಯ ಅವಧಿ ಮತ್ತು ಇತ್ತೀಚಿನ ದಿನಗಳಲ್ಲಿ ಆಡಿರುವ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.ಕೆ.ಎಲ್.ರಾಹುಲ್ ಅವರನ್ನು ಬಲ ತೊಡೆಯ ನೋವಿನ ಕಾರಣಕ್ಕೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲೂ ಆಡಿರಲಿಲ್ಲ.ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.
ಧರ್ಮಶಾಲಾದಲ್ಲಿ ಮಾರ್ಚ್ 7ರಿಂದ ನಡೆಯಲಿರುವ ಐದನೇ ಟೆಸ್ಟ್ಗೆ ರಾಹುಲ್ ಅವರ ಲಭ್ಯತೆ ಅವರ ಫಿಟ್ನೆಸ್ ಅನ್ನು ಅವಲಂಬಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.ಮುಕೇಶ್ ಕುಮಾರ್ ಅವರನ್ನು ನಾಲ್ಕನೇ ಟೆಸ್ಟ್ಗೆ ಸೇರ್ಪಡೆ ಮಾಡಲಾಗಿದೆ.