ನವದೆಹಲಿ: ಬಿಜೆಪಿ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿದೆ. ಆಂಧ್ರಪ್ರದೇಶ ರಾಜ್ಯದ ಅಧ್ಯಕ್ಷರಾಗಿ ಪುರಂದರೇಶ್ವರಿ, ತೆಲಂಗಾಣಕ್ಕೆ ಕಿಶನ್ ರೆಡ್ಡಿ, ಪಂಜಾಬ್ ರಾಜ್ಯಕ್ಕೆ ಸುನೀಲ್ ಜಾಖರ್, ಜಾರ್ಖಂಡ್ ರಾಜ್ಯಕ್ಕೆ ಬಾಬುಲಾಲ್ ಮರಾಂಡಿ ಅವರನ್ನು ನೇಮಕ ಮಾಡಿದೆ.ಮುಂದಿನ ವರ್ಷದ ಆರಂಭದಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ನೇಮಕ ನಡೆದಿದೆ. ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಚುನಾವಣೆ ತಯಾರಿ ಆರಂಭಿಸಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.