ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 41 ರನ್ಗಳಿಂದ ಸೋಲುವ ಮೂಲಕ 1–2ರಿಂದ .
ಸರಣಿ ಸೋತಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತದ ಗೆಲುವಿಗೆ 338 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ
ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಶರ್ಮಾ (11 ರನ್), ಶುಭಮನ್ ಗಿಲ್ (23 ರನ್) ವಿಕೆಟ್ ಒಪ್ಪಿಸಿ ಹೊರನಡೆದರು.ನಂತರ ಬಂದ ಶ್ರೇಯಸ್ ಅಯ್ಯರ್ (3 ರನ್), ಕೆ.ಎಲ್. ರಾಹುಲ್ (1 ರನ್) ಗಳಿಸಿ ಪೆವಿಲಿಯನ್ ಸೇರಿಕೊಂಡರು. ಒಂದು ಹಂತದಲ್ಲಿ ಭಾರತ ತಂಡ 200 ತಲುಪುವುದು ಕೂಡ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಯಿತು.
ಒಂದೆಡೆ ವಿಕೆಟ್ ಉರುಳುತ್ತಿದ್ದಾಗಲೂ ಕ್ರೀಸ್ ಕಚ್ಚಿ ನಿಂತಿದ್ದ ವಿರಾಟ್ ಕೊಹ್ಲಿ ನಿತೀಶ್ ರೆಡ್ಡಿ ಜೊತೆ ಉತ್ತಮ ಜೊತೆಯಾಟ ಆಡಿದರು. ಈ ಹಂತದಲ್ಲಿ ನಿತೀಶ್ (53 ರನ್) ಗಳಿಸಿ ಔಟ್ ಆದರು. ನಂತರ ಬಂದ ಜಡೇಜ (13) ಬೃಹತ್ ಮೊತ್ತ ಕಲೆಹಾಕಲು ವಿಫಲರಾದರು. ಆದರೆ, ಹರ್ಷಿತ್ ರಾಣಾ (52 ರನ್, 43ಎ, 4X4 ಹಾಗೂ 6X4) ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಗೆಲಯವಿನ ಆಸೆ ಮೂಡಿಸಿದರು.
ಅಂತಿಮವಾಗಿ ವಿರಾಟ್ ಕೊಹ್ಲಿ (124 ರನ್, 108 ಎ, 4X10 ಹಾಗೂ 6X3) ರನ್ ಗಳಿಸಿ ಔಟ್ ಆಗುತ್ತಿದ್ದಂತೆ ಭಾರತ 41 ರನ್ಗಳ ಸೋಲು ಕಂಡಿತು. ನ್ಯೂಜಿಲೆಂಡ್ ಪರ ಝಕರ ಫೌಲ್ಕ್ಸ್ ಹಾಗೂ ಕ್ರಿಸ್ತಿಯನ್ ಕ್ಲಾರ್ಕ್ ತಲಾ 3 ವಿಕೆಟ್ ಪಡೆದುಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಡಾರೆಲ್ ಮಿಚೆಲ್ ಅವರು 131 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 137 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ ಕೇವಲ 88 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ106 ರನ್ ಕಲೆಹಾಕಿದರು. ಕೊನೆಯಲ್ಲಿ ನಾಯಕ ಮೈಕಲ್ ಬ್ರೇಸ್ವೆಲ್ ಸ್ಫೋಟಕ 28 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 337ಕ್ಕೆ ತಲುಪಿಸಿದರು.
ಭಾರತದ ಪರ ಅರ್ಷದೀಪ ಸಿಂಗ್ ಹಾಗೂ ಹರ್ಷಿತ್ ರಾಣ 3 ವಿಕೆಟ್ ಪಡೆದುಕೊಂಡರು. ಮೊಹಮ್ಮದ್ ಸಿರಾಜ್ ಹಾಗೂ ಕುಲದೀಪ ಯಾದವ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.












