ಅಡಿಲೈಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೇಡ್ ಡೇ ನೈಟ್ ಟೆಸ್ಟ್ನ ಮೊದಲ ದಿನದ ಆಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಒಂದು ವಿಕೆಟ್ಗೆ 86 ರನ್ ಗಳಿಸಿದೆ. ಮಾರ್ನಸ್ ಲಬುಶೇನ್ 20 ರನ್ ಹಾಗೂ ನಾಥನ್ ಮೆಕ್ಸ್ವೀನಿ 38 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಈ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ
ಕೇವಲ 180 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಉಸ್ಮಾನ್ ಖವಾಜಾ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದರು.ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ 42 ರನ್ ಗಳಿಸಿದ ನಿತೀಶ್ ಕುಮಾರ್ ರೆಡ್ಡಿ ಟಾಪ್ ಸ್ಕೋರರ್ ಆದರು. ಕೆ.ಎಲ್.ರಾಹುಲ್ 37, ಶುಭ್ಮನ್ ಗಿಲ್ 31, ಆರ್. ಅಶ್ವಿನ್ 22 ರಿಷಬ್ ಪಂತ್ 21 ರನ್ ಬಾರಿಸಿದರು. ಭಾರತ ತನ್ನ ಮೊದಲ 5 ವಿಕೆಟ್ಗಳನ್ನು ಕೇವಲ 87 ರನ್ಗಳಿಗೆ ಕಳೆದುಕೊಂಡಿತು. ಸ್ಕೋರ್ ಬೋರ್ಡ್ ತನ್ನ ಖಾತೆ ತೆರೆಯುವ ಮೊದಲೇ ಭಾರತ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪಂದ್ಯದ ಮೊದಲ ಎಸೆತದಲ್ಲೇ ಜೈಸ್ವಾಲ್ ಔಟಾದರು. ಅವರ ವಿಕೆಟ್ನ ನಂತರ, ಕೆಎಲ್ ರಾಹುಲ್ ಮತ್ತು ಗಿಲ್ ನಡುವೆ ಎರಡನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ನೀಡಿದರು.ಈ ಜೋಡಿಯ ವಿಕೆಟ್ ಪತನದ ನಂತರದ ಅಡಿಲೇಡ್ನಲ್ಲಿ ಭಾರತದ ಪೆವಿಲಿಯನ್ ಪರೇಡ್ ಆರಂಭವಾಯಿತು. ವಿರಾಟ್ ಕೊಹ್ಲಿ 7, ನಾಯಕ ರೋಹಿತ್ ಶರ್ಮ 3 ರನ್ ಬಾರಿಸಿದರು.
ಮಿಚೆಲ್ ಸ್ಟಾರ್ಕ್ , ಸ್ಕಾಟ್ ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ ಭಾರತದ ಬ್ಯಾಟಿಂಬ್ ಬೆನ್ನೆಲುಬು ಮುರಿದರು. ಸ್ಟಾರ್ಕ್ 48 ರನ್ ನೀಡಿ 6 ವಿಕೆಟ್ ಪಡೆದರೆ,ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ ತಲಾ ವಿಕೆಟ್ ಉರುಳಿಸಿದರು.