ಸೆಂಚುರಿಯನ್: ಕೆ.ಎಲ್.ರಾಹುಲ್ ಅವರ ಅರ್ಧಶತಕದ ಬಲದಿಂದ ಭಾರತ ತಂಡವು ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಸಾಧಾರಣ ಮೊತ್ತ ಪೇರಿಸಿದೆ. ಮಳೆಯಿಂದಾಗಿ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು. ಮೊದಲ ದಿನದಾಟದ ಅಂತ್ಯಕ್ಕೆ
ಭಾರತ 59 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ಆರಂಭಿಕ ವೈಫಲ್ಯ ಕಂಡ ಭಾರತ ತಂಡಕ್ಕೆ ರಾಹುಲ್ ಔಟಾಗದೆ 70 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 38, ಶ್ರೇಯಸ್ ಅಯ್ಯರ್ 31, ಶಾರ್ದೂಲ್ ಠಾಕೂರ್ 24 ರನ್ ಗಳಿಸಿದ್ದಾರೆ. ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಕ್ರೀಸಿನಲ್ಲಿದ್ದಾರೆ.
24ರನ್ ಗಳಿಸುವಷ್ಟರಲ್ಲಿ ಭಾರತ ತಂಡವು ಆರಂಭಿಕರಾದ ರೋಹಿತ್ ಶರ್ಮಾ (5), ಯಶಸ್ವಿ ಜೈಸ್ವಾಲ್ (17) ಹಾಗೂ ಶುಭಮನ್ ಗಿಲ್ (2) ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 5, ನ್ಯಾಂಡ್ರೆ ಬರ್ಗರ್ 2, ಮಾರ್ಕೊ ಯಾನ್ಸೆನ್ ಒಂದು ವಿಕೆಟ್ ಪಡೆದಿದ್ದಾರೆ.










