ಹೈದರಾಬಾದ್: ಇಂದು ಆರಂಭವಾಗಿವರುವ ಐದು ಟೆಸ್ಟ್ಗಳ ದೀರ್ಘ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತಿರುವ ಪಂದ್ಯದಲ್ಲಿ ಲಂಚ್ ವೇಳೆಗೆ ಭಾರತದ
ಸ್ಪಿನ್ ದಾಳಿಗೆ ಸಿಲುಕಿರುವ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ. 32 ರನ್ ಗಳಿಸಿರುವ ಜಾನಿ ಬೇಸ್ಟೋ ಹಾಗೂ 18 ರನ್ ಗಳಿಸಿರುವ ಜೋ ರೂಟ್ ಕ್ರೀಸಿನಲ್ಲಿದ್ದಾರೆ. ಭಾರತದ ಪರ ಆರ್.ಅಶ್ವಿನ್ 2, ರವೀಂದ್ರ ಜಡೇಜ 1 ವಿಕೆಟ್ ಪಡೆದಿದ್ದಾರೆ.ಭಾರತದ ತಂಡದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಡುತ್ತಿಲ್ಲ.ಮೊದಲ ಎರಡು ಪಂದ್ಯಕ್ಕೆ ಕೊಹ್ಲಿ ಅಲಭ್ಯರಾಗಿದ್ದಾರೆ.










