ಸುಳ್ಯ:ಸುಳ್ಯ ತಾಲೂಕು ಪಂಚಾಯತ್ಗೆ ದ.ಕ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ ಭೇಟಿ ನೀಡಿದರು. ಬಳಿಕ ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಅಮೃತ ಮುಕ್ತಿಧಾಮ, ಅಮೃತ ಉದ್ಯಾನವನ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ, ಅರಂತೋಡು ಗ್ರಾಮ ಪಂಚಾಯತ್
ಗ್ರಂಥಾಲಯ, ಅಂಗನವಾಡಿ ಹಾಗೂ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಅರಂಬೂರು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿ ಶಂಕರ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸುಂದರಯ್ಯ, ತಾ.ಪಂ.ಸಹಾಯಕ ನಿರ್ದೇಶಕ
ಸರೋಜಿನಿ ಬಿ, ತಾ.ಪಂ ವ್ಯವಸ್ಥಾಪಕರಾದ ಹರೀಶ್ ಕಚೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಭಿಯಂತರರಾದ ಮಣಿಕಂಠನ್ ಉಪಸ್ಥಿತರಿದ್ದರು. ಕಾಮಗಾರಿ ಪರಿಶೀಲನೆ ಸಂದರ್ಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.