ಸುಳ್ಯ: ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ರಚಿಸುವ ಬಗ್ಗೆ ಸಮಾಲೋಚನಾ ಸಭೆ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಅಧ್ಯಕ್ಷತೆಯಲ್ಲಿ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಚೇತನ್ ಕಜೆಗದ್ದೆ ಮಾತನಾಡಿ ನೂತನ ಸಮಿತಿ ರಚನೆ ಬಗ್ಗೆ ಕೆಪಿಸಿಸಿ ನಿಯಮಾವಳಿ ಪ್ರಕಾರ ಎಲ್ಲಾ ಸಮುದಾಯ ಮತ್ತು ಪ್ರಾದೇಶಿಕವಾರು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವವರನ್ನು
ಜೊತೆ ಸೇರಿಸಿಕೊಂಡು ನೂತನ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ ಶಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ ಎಂ ಜೆ, ಸುಳ್ಯ ತಾಲೂಕು

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ವಿಜೇಶ್ ಹಿರಿಯಡ್ಕ,ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್ . ಸಿ ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಸುಳ್ಯ ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫೈಜಲ್ ಕಡಬ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಸುಳ್ಯ ಬ್ಲಾಕ್ ಎನ್ ಎಸ್ ಯು ಐ ಅಧ್ಯಕ್ಷ ಧನುಷ್ ಕುಕ್ಕೇಟಿ ಮತ್ತು ಸಂಪಾಜೆ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿತಿನ್ ಗೂನಡ್ಕ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ನ ನೂತನ ಸಮಿತಿಯ ಪ್ರಮುಖರಾದ ಶೌಕತ್ ಅಲಿ ಅಡ್ಪಂಗಾಯ, ರಕ್ಷಿತ್ ಗೂನಡ್ಕ, ಮನೋಜ್ ತೊಡಿಕಾನ, ಪ್ರೇಮಾ ಹರೀಶ್ವರನ್ ಅಡ್ಯಡ್ಕ, ಪ್ರತಿಭಾ ಕಾಯರ, ಪ್ರಕಾಶ್ ಪಿ ಎಸ್ ಅರಂತೋಡು, ಶರವಣ ಕುಮಾರ್ ಮೇದಿನಡ್ಕ, ಮೊಹಮ್ಮದ್ ಶರೀಫ್ ಬೆಳ್ಳಾರೆ, ಯಕ್ಷಿತ್ ಮಡ್ತಿಲ, ರಂಜಿತ್ ಪೈಕ, ಹರೀಶ್ ಮೆಟ್ಟಿನಡ್ಕ, ಇಬ್ರಾಹಿಂ ಜಯನಗರ, ಪ್ರಕಾಶ್ ಮೇನಾಲ, ಮಧುಸೂದನ ಬೂಡು, ಅಬ್ದುಲ್ ಶಹೀದ್, ನಿಸಾರ್ ಪೈಂಬೆಚ್ಚಾಲು, ಭೂ ನ್ಯಾಯ ಮಂಡಳಿ ಸದಸ್ಯ ಕರುಣಾಕರ ಮಡ್ತಿಲ, ಕೊಯ್ಕುಳಿ ಬೂತ್ ಅಧ್ಯಕ್ಷರಾದ ಭಾಗೀಶ್ ಕೆ ಟಿ, ಕೇಶವ ಮೊರಂಗಲ್ಲು, ಸುಧೀರ್ ಅಮೆ ಭಾಗವಹಿಸಿದರು.





