ಸುಳ್ಯ: ಸುಳ್ಯ ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಕೃಷಿ ಯಂತ್ರಗಳನ್ನು ವಿತರಿಸಿದರು. 4 ಹೆಚ್ಪಿ ಟಿಪಿ ಪವರ್ ಸ್ಪ್ರೇಯರ್, ಮೋಟೋ ಕಾರ್ಟ್ ಸೇರಿದಂತೆ 15 ಮಂದಿಗೆ
ಯಂತ್ರಗಳನ್ನು ವಿತರಿಸಿದರು.ಆತ್ಮಹತ್ಯೆ ಮಾಡಿದ ಎರಡು ಮಂದಿ ಕೃಷಿಕರ ಕುಟುಂಬಕ್ಕೆ ತಲಾ 5 ಲಕ್ಷದ ಪರಿಹಾರ ಚೆಕ್ ವಿತರಿಸಲಾಯಿತು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಶಂಕರ್ ಪೆರಾಜೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರು ಪ್ರಸಾದ್, ತಾಲೂಕು ಪಂಚಾಯತ್ ಎನ್ಎಲ್ಎಲ್ಎಂ ಟಿಪಿಎಂ ಶ್ವೇತಾ ರಾಜೇಶ್ ಉಪಸ್ಥಿತರಿದ್ದರು.ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ನಂದಿತ ಸ್ವಾಗತಿಸಿ, ಗಣ್ಯ ವಂದಿಸಿದರು.










