ಬನ್ನಡ್ಕ:ಯಕ್ಷಸಿರಿ ಕಲಾವೇದಿಕೆ ಖಂಡಿಗಮೂಲೆಯ ಯಕ್ಷ ಸಂಗಮ ಸಂಭ್ರಮ ನಡೆಯಿತು. ಸುಳ್ಯ ತಾಲೂಕಿನಲ್ಲಿ ಪ್ರಾರಂಭವಾಗಿ 20 ವರ್ಷಗಳು, ಇದರ ಶಾಖಾ ತಂಡ ಬನ್ನಡ್ಕದಲ್ಲಿ ಆರಂಭವಾಗಿ ಐದು ವರ್ಷ, ಈ ಸಂದರ್ಭ, ಖಂಡಿಗ ಮೂಲೆ, ಬನ್ನಡ್ಕ, ಹಾಗೂ ಎಸ್ ಎನ್ ಮೂಡಬಿದಿರೆ ಪಾಲಿಟೆಕ್ನಿಕ್ ನ ಯಕ್ಷ ವೃಂದ ತಂಡಗಳು ಎಲ್ಲರ
ಸಹಕಾರದೊಂದಿಗೆ ಒಟ್ಟಾಗಿ ಸೇರಿ ಯಕ್ಷ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯಕ್ಷ ಸಿರಿ ಕಲಾವೇದಿಕೆ ಬನ್ನಡ್ಕ ಇದರ ವಿದ್ಯಾರ್ಥಿಗಳ ಸಂಯೋಜನೆಯಲ್ಲಿ ಬನ್ನಡ್ಕದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಈ ಯಕ್ಷಸಂಗಮವು ಅನೇಕ ಚಟುವಟಿಕೆಗಳೊಂದಿಗೆ ಮೇಳಯಿಸಿತು. ಬೆಳಗಿನ ಅವಧಿಯಲ್ಲಿ ಗಣಹವನದೊಂದಿಗೆ ಆರಂಭಿಸಿ, ಪುಟಾಣಿ ವಿದ್ಯಾರ್ಥಿಗಳಿಂದ ಗಾಯನ ನೃತ್ಯ ವೈವಿಧ್ಯಗಳು ನಡೆದವು. ತದನಂತರ ರಂಗ ಸುರಭಿ ಕಲ್ಮಡ್ಕ ಇದರ ಸಂಚಾಲಕರಾದ ಮಹಾಬಲ ಭಟ್ ಕಲ್ಮಡ್ಕ ಇವರು ವಿದ್ಯಾರ್ಥಿಗಳಿಗೆ ಮುಖವರ್ಣಿಕ ಕಾರ್ಯಗಾರವನ್ನು ನಡೆಸಿಕೊಟ್ಟರು.
ಕೆ ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಬ್ರಹ್ಮಶ್ರೀ ಈಶ್ವರ ಭಟ್ ಆಲಂಂಗಾರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಂ ದಯಾನಂದ ಪೈ, ಸುಕುಮಾರ್ ಬಲ್ಲಾಳ್, ಶಾಂತರಾಮ ಕುಡ್ವ, ಜೆ ಜೆ ಪಿಂಟೋ, ನಮಿರಾಜ್ ಬಲ್ಲಾಳ್ ಶುಭ ಹಾರೈಸಿದರು. ವಿಶ್ವ ವಿನೋದ ಬನಾರಿ ಹಾಗೂ ಕೆ ಶಾಮ ಭಟ್ ಗೌರವ ಉಪಸ್ಥಿತರಿದ್ದರು. ಅನೇಕ ವರ್ಷಗಳ ಕಾಲ ಯಕ್ಷಸಿರಿಯಲ್ಲಿ
ಯಕ್ಷ ನಾಟ್ಯ ಹೇಳಿಕೊಡುತ್ತಿದ್ದ ಸುಧಾಕರ ಕಾಂತಮಂಗಲ, ವೇಷಭೂಷಣವನ್ನು ಒದಗಿಸುತ್ತಿರುವ ಮಹಾಬಲ ಭಟ್ ಕಲ್ಮಡ್ಕ ಇವರನ್ನು ಗೌರವಿಸಲಾಯಿತು. ತಂಡದ ಸ್ಥಾಪಕರು ಸಂಚಾಲಕರು ಆದ ಶಾಮ ಭಟ್ ದಂಪತಿಗಳಿಗೆ, ನೃತ್ಯ ಗುರುಗಳಾದ ಗೋಪಾಲಕೃಷ್ಣ ಕೆ ಎಸ್ ಹಾಗೂ ಸರೋಜಿನಿ ಬನಾರಿಯವರಿಗೆ ತಂಡದ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ನಡೆಸಿದರು. ಹಿರಿಯ ವಿದ್ಯಾರ್ಥಿ ಶ್ರದ್ಧಾ ಶಶಿಧರ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರೀಗೌರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೀಡಿದರೆ, ಅಪೇಕ್ಷಾ ವಂದನಾರ್ಪಣೆಗೈದರು. ವಿಜೇತ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತಂಡದ ಕಲಾವಿದರಿಂದ ಯಕ್ಷ- ಗಾನ ವೈಭವ, ಯಕ್ಷ ವೃಂದದ ವಿದ್ಯಾರ್ಥಿಗಳಿಂದ ವೀರ ಬಬ್ರುವಾಹನ ತಾಳಮದ್ದಳೆ, ತಂಡದ ವಿದ್ಯಾರ್ಥಿಗಳಿಂದ ನರಕಾಸುರ ಮೋಕ್ಷ ಮತ್ತು ದಕ್ಷ ಯಜ್ಞ ಯಕ್ಷಗಾನ ಬಯಲಾಟ ನಡೆದವು. ಚಿನ್ಮಯ ಭಟ್ ಕಲ್ಲಡ್ಕ, ಶಿವಪ್ರಸಾದ್ ಭಟ್ ಕಾಂತವರ, ನಿತೀಶ್ ಕುಮಾರ್, ಚಂದ್ರಶೇಖರ ಗುರುವಾಯನಕೆರೆ, ಜನಾರ್ಧನ ಆಚಾರ್ಯ, ವಿಷ್ಣು ಶರಣ ಬನಾರಿ ಹಿಮ್ಮೇಳದಲ್ಲಿ ಸಹಕರಿಸಿದರು.