ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಹಾಗೂ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ಟೀಮ್ ಸೆಣೆಸಾಟ ನಡೆಸಲಿದೆ.
ಲಖನೌದ ಭಾರತ್ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ
ಸ್ಟೇಡಿಯಂನಲ್ಲಿ ಬೆಳಗ್ಗೆ 10:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲೆಂಡ್ಸ್ ಮತ್ತು ಕುಸಲ್ ಮೆಂಡಿಸ್ ನೇತೃತ್ವದ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ರಿಂದ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಇಂಗ್ಲೆಂಡ್ ಹಾಗೂ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ಟೀಮ್ ಸೆಣೆಸಾಟ ನಡೆಸಲಿದೆ. ನೆದರ್ಲೆಂಡ್ಸ್-ಶ್ರೀಲಂಕಾ
ನೆದರ್ಲೆಂಡ್ಸ್ ತಂಡ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೀಡಿದ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಲ್ಲಿ ಡಚ್ಚರು 38 ರನ್ಗಳಿಂದ ಗೆದ್ದು ಬೀಗಿದ್ದರು. ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದ ಲಂಕಾ ವಿರುದ್ಧ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ. ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸಿಂಹಳೀಯರು ವಿಶ್ವಕಪ್ನಲ್ಲಿ ಮಂಕಾಗಿದ್ದಾರೆ. ಜೊತೆಗೆ ದಸುನ್ ಶನಕಾ, ಹಸರಂಗ ಅಂತಹ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. ನೆದರ್ಲೆಂಡ್ಸ್ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ ಲಂಕಾನ್ನರು ಖಾತೆ ತೆರೆಯುವ ಪ್ಲಾನ್ನಲ್ಲಿದ್ದಾರೆ.