ಚೆನ್ನೈ: ಯುವ ಆಟಗಾರ್ತಿ ಶಫಾಲಿ ವರ್ಮಾ ದಾಖಲೆ ವೇಗದ ದ್ವಿಶತಕ, ಸ್ಮೃತಿ ಮಂದಾನ ಶತಕ ಬಾರಿಸಿ ಮಿಂಚಿದರು. ಪ್ರವಾಸಿ ದಕ್ಷಿಣ ಆಫ್ರಿಕ ತಂಡದ ವಿರುದ್ಧ ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಆರಂಭವಾದ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿತು. ದಿನದಾಟದ ಅಂತ್ಯಕ್ಕೆ ಆತಿಥೇಯರು 4 ವಿಕೆಟ್ಗೆ 525 ರನ್ಗಳ ಬೃಹತ್ ಮೊತ್ತ ಪೇರಿಸಿದೆ.ಇದು ಟೆಸ್ಟ್ ಪಂದ್ಯವೊಂದರಲ್ಲಿ
ಒಂದೇ ದಿನ ದಾಖಲಾದ ಅತಿ ಹೆಚ್ಚಿನ ಮೊತ್ತ. ಶಪಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ 204 ರನ್ ಹೊಡೆದರು. ಶಫಾಲಿ, ಸ್ಮೃತಿ ಮಂದಾನ (149, 161ಎ) ಜೊತೆ ಮೊದಲ ವಿಕೆಟ್ಗೆ 292 ರನ್ ಸೇರಿಸಿ ಸುಭದ್ರ ಅಡಿಪಾಯ ಹಾಕಿಕೊಟ್ಟರು. 20 ವರ್ಷದ ಶಫಾಲಿ ವೇಗದ ದ್ವಿಶತಕಕ್ಕೆ ದಾಖಲೆ ಬರೆದರು. ಮಿತಾಲಿ ರಾಜ್ ನಂತರ ಟೆಸ್ಟ್ನಲ್ಲಿ ದ್ವಿಶತಕ ಹೊಡೆದ ಭಾರತದ ಎರಡನೇ ಆಟಗಾರ್ತಿಯರೆಂಬ ಶ್ರೇಯವೂ ಶಫಾಲಿ ಅವರದಾಯಿತು.ಶಫಾಲಿ ಚಾರಿತ್ರಿಕ ದ್ವಿಶತಕ ಪೂರೈಸಿದ ಕೆಲವೇ ನಿಮಿಷಗಳ ನಂತರ ರನೌಟ್ ಆದರು. ಕೇವಲ ಐದನೇ ಟೆಸ್ಟ್ ಆಡುತ್ತಿರುವ ಅವರು 197 ಎಸೆತಗಳನ್ನೆದುರಿಸಿ 23 ಬೌಂಡರಿಗಳ ಜೊತೆಗೆ ಎಂಟು ಸಿಕ್ಸರ್ಗಳನ್ನು ಹೊಡೆದಟ್ಟಿದರು. ಟೆಸ್ಟ್ನಲ್ಲಿ ಅವರ ಹಿಂದಿನ ಗರಿಷ್ಠ ಗಳಿಕೆ 96.ಭಾರತ ಬ್ಯಾಟಿಂಗ್ ಆಯ್ದುಕೊಂಡ ನಂತರ ಶಫಾಲಿ ಮತ್ತು ಸ್ಮೃತಿ ಲಂಚ್ ವೇಳೆಗೆ ವಿಕೆಟ್ ನಷ್ಟವಿಲ್ಲದೆ 130 ರನ್ ಸೇರಿಸಿದ್ದರು.292 ರನ್ ಸೇರಿಸಿದ ಬಳಿಕ ಉಪನಾಯಕಿ ಮಂದಾನ (4×27, 6×1), ಸ್ಮೃತಿ ಅವರ ಈ ಹಿಂದಿನ ಗರಿಷ್ಠ ವೈಯಕ್ತಿಕ ಗಳಿಕೆ 127 ಆಗಿತ್ತು.
ಶುಭಾ ಸತೀಶ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಶಫಾಲಿ, ಜೆಮಿಮಾ ರಾಡ್ರಿಗಸ್ (55) ಜೊತೆ ಮೂರನೇ ವಿಕೆಟ್ಗೆ 86 ರನ್ ಸೇರಿಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ (ಔಟಾಗದೇ 42) ಮತ್ತು ರಿಚಾ ಘೋಷ್ (ಔಟಾಗದೇ 43) ಕ್ರೀಸಿನಲ್ಲಿದ್ದಾರೆ.














