ಸುಳ್ಯ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಸುಳ್ಯಕ್ಕೆ ಭೇಟಿ ನೀಡಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರನ್ನು ಕಾಂಗ್ರೆಸ್ ಮುಖಂಡರು, ಪ್ರಮುಖರು ಸೇರಿ ಸುಳ್ಯ ನಗರದ ಜ್ಯೋತಿ ವೃತ್ತದಲ್ಲಿ
ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ನ.ಪಂ.ಸದಸ್ಯ ರಾಜು ಪಂಡಿತ್, ಕೆ.ಟಿ.ವಿಶ್ವನಾಥ, ಆಶ್ರಫ್ ಗುಂಡಿ,ಕರ್ನಾಟಕ ಹೈಕೋರ್ಟ್ ಸರಕಾರಿ ಪ್ಲೀಡರ್ ವಹೀದಾ ಹ್ಯಾರೀಸ್ ತೆಕ್ಕಿಲ್, ಟಿ.ಎಂ.ಜಾವೇದ್ ತೆಕ್ಕಿಲ್ ಪಿ.ಎಂ.ಹ್ಯಾರೀಸ್ ತೆಕ್ಕಿಲ್, ಹನೀಫ್ ಬೀಜದಕೊಚ್ಚಿ, ಸಲೀಂ ಪೆರುಂಗೋಡಿ ಮತ್ತಿತರರು ಉಪಸ್ಥಿತರಿದ್ದರು