(ಸಾಂದರ್ಭಿಕ ಚಿತ್ರ)
ಮಡಿಕೇರಿ:ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆಯ ಎಂಬಲ್ಲಿ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ.ಭಾನುವಾರ ಬೆಳಗ್ಗೆ ಗ್ರಾಮ ಪಂಚಾಯಿತಿ ಬಳಿ ಇರುವ
ತೋಟದ ಮೂಲಕ ಬಂದ ಕಾಡಾನೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಆದರೆ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅವರ ಕಾರನ್ನು ಜಖಂಗೊಳಿಸಿ ತೋಟದೊಳಗೆ ಕಣ್ಮರೆಯಾದಂತೆ ಅದೇ ಮಾರ್ಗದಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡಿದೆ.ದಿಢೀರ್ ಆಗಿ ಕಾಣಿಸಿಕೊಂಡ ಕಾಡಾನೆಗಳಿಂದ ಈ ಭಾಗದ ಜನ ಭಯಬೀತರಾಗಿದ್ದಾರೆ.